More

    ‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಸ್ವದೇಶಿ ಸಾಮಾಜಿಕ ಜಾಲತಾಣವಾದ ‘ಕೂ’ನಲ್ಲಿ ಬಂಡವಾಳ ತೊಡಗಿಸಿದ್ದಾರೆ. ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ‘ಕೂ’ನ ಮೂಲ ಕಂಪನಿ ‘ಬಾಂಬಿನೇಟ್ ಟೆಕ್ನಾಲಜೀಸ್’ನಲ್ಲಿ ಹಣಕಾಸು ಹೂಡಿಕೆ ಮಾಡಿದ್ದಾರೆ.

    ‘ಭಾರತದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಕೂಗೆ ಬೆಂಬಲವಾಗಿ ನಿಲ್ಲಲು ನನಗೆ ಖುಷಿಯಾಗುತ್ತಿದೆ. ಕೂ ಕನ್ನಡ ಆರಂಭವಾದಾಗಲೇ ನಾನು ಇದಕ್ಕೆ ಸೇರಿದ್ದೆ. ಭಾರತ ಸಾವಿರಕ್ಕೂ ಅಧಿಕ ಭಾಷೆ ಹೊಂದಿರುವ ವೈವಿಧ್ಯತೆಯ ದೇಶ. ಹೀಗಾಗಿ ಎಲ್ಲರ ಧ್ವನಿಗೂ ವೇದಿಕೆ ಕಲ್ಪಿಸುವುದು ಮುಖ್ಯವಾದುದು. ಭಾರತದ ಎಲ್ಲ ಭಾಷೆಯ ಜನರನ್ನೂ ಅಂತರ್ಜಾಲಕ್ಕೆ ತರುವ ಪ್ರಯತ್ನವನ್ನು ಕೂ ಮಾಡುತ್ತಿದೆ. ಭಾರತದ ಯಶಸ್ಸಿಗಾಗಿ ನಾನು ಎಲ್ಲ ರೀತಿಯ ಬೆಂಬಲವನ್ನು ನೀಡಲು ಸಿದ್ಧನಿದ್ದೇನೆ’ ಎಂದು ಸದ್ಯ ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ 51 ವರ್ಷದ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.

    ಇದನ್ನೂ ಓದಿ: ಟೀಮ್ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧಕೃಷ್ಣ

    ಕನ್ನಡದಲ್ಲಿ ಮಾತ್ರ ಇದ್ದಾಗಲೇ ‘ಕೂ’ಗೇ ಸೇರ್ಪಡೆಗೊಂಡಿದ್ದ ಶ್ರೀನಾಥ್ ಈಗ 1 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಇದು ಅವರು ಟ್ವಿಟರ್‌ನಲ್ಲಿ ಹೊಂದಿರುವ ಹಿಂಬಾಲಕರ ಸಂಖ್ಯೆಗಿಂತ (11,250+) ಭಾರಿ ಹೆಚ್ಚಾಗಿದೆ. ಕೂ ಆ್ಯಪ್ ಈಗ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಬೆಂಗಾಲಿ ಮತ್ತಿತರ ಭಾಷೆಗಳಲ್ಲೂ ಲಭ್ಯವಿದೆ.

    2020ರ ಮಾರ್ಚ್‌ನಲ್ಲಿ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡವಟ್ಕ ಆರಂಭಿಸಿದ ‘ಕೂ’ ಮೈಕ್ರೋ-ಬ್ಲಾಗಿಂಗ್ ವೇದಿಕೆ ವಿವಿಧ ಪ್ರಾದೇಶಿಕ ಭಾಷೆಯ ಮೂಲಕ ಭಾರತದ ಎಲ್ಲೆಡೆಯ ಜನರನ್ನು ಒಗ್ಗೂಡಿಸಿದೆ ಮತ್ತು ಮಾತೃಭಾಷೆಯಲ್ಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿದೆ.

    ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಜಾವಗಲ್ ಶ್ರೀನಾಥ್, ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಅತ್ಯಧಿಕ ವಿಕೆಟ್ ಕಬಳಿಸಿದ ವೇಗಿ ಎನಿಸಿದ್ದಾರೆ. ಅವರು ಭಾರತ ಪರ 67 ಟೆಸ್ಟ್, 229 ಏಕದಿನ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 236 ಮತ್ತು 315 ವಿಕೆಟ್ ಕಬಳಿಸಿದ್ದಾರೆ. ಕಪಿಲ್ ದೇವ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ ಭಾರತದ 2ನೇ ವೇಗಿ ಎನಿಸಿದ್ದರು.

    ಟೆನಿಸ್ ತಾರೆ ಜೋಕೊವಿಕ್‌ರನ್ನು ಹನಿಟ್ರ್ಯಾಪ್ ಮಾಡಲು ರೂಪದರ್ಶಿಗೆ ಭಾರಿ ಮೊತ್ತದ ಆಮಿಷ!

    ಆರ್.ಅಶ್ವಿನ್ ಮಹಿಳಾ ಕ್ರಿಕೆಟ್ ಪ್ರೀತಿಗೆ ಇಂಗ್ಲೆಂಡ್ ಸ್ಟಾರ್ ಆಟಗಾರ್ತಿ ಫಿದಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts