ಲಖನೌ: ಕಾರ್ಯಕ್ರಮ ಒಂದರ ಶಂಕುಸ್ಥಾಪನೆಯಲ್ಲಿ 'ಭಾರತ್ ಮಾತಾ ಕಿ ಜೈ' ಎನ್ನುವ ವಿಚಾರವಾಗಿ ಜನಪ್ರತಿನಿಧಿಗಳಿಬ್ಬರ ನಡುವೆ ವಾಗ್ವಾದವಾಗಿರುವ ಘಟನೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.
ಅಮ್ರೋಹ ಲೋಕಸಭೆ ಕ್ಷೇತ್ರದ ಬಿಎಸ್ಪಿ ಸಂಸದ ಕುನ್ವರ್ ಡ್ಯಾನಿಶ್ ಅಲಿ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯ ಹರಿಸಿಂಗ್ ದಿಲ್ಲೋನ್ ನಡುವೆ ವಾಗ್ವಾದ ನಡೆದಿದೆ. ಇಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಭಾನುವಾರ ಅಮೃತ್ ಭಾರತ ನಿಲ್ದಾಣದ ಯೋಜನೆಯ ಶಂಕುಸ್ಥಾಪನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವನ್ನೂ ನೆರವೇರಿಸಿದ್ಧಾರೆ.
ಶಂಕುಸ್ಥಾಪನೆ ಬಳಿಕ ಕಾರ್ಯಕ್ರಮವನ್ನೂ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹರಿಸಿಂಗ್ ದಿಲ್ಲೋನ್ ಮೊದಲಿಗೆ 'ಭಾರತ್ ಮಾತಾ ಕಿ ಜೈ' ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನೂ ಆರಂಭಿಸಿದ್ದಾರೆ. ಈ ವೇಳೆ ಇದಕ್ಕೆ ಆಕ್ಷೇಪಿಸಿದ ಸಂಸದ ಕುನ್ವರ್ ಡ್ಯಾನಿಶ್ ಅಲಿ ಸರ್ಕಾರಿ ಕಾರ್ಯಕ್ರಮವನ್ನೂ ನಿಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಳ್ಳಬೇಡಿ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರೂ ನಾಯಕರ ನಡುವಿನ ವಾಗ್ವಾದಕ್ಕೆ ಕಾರಣವಾಗಿದ್ದೂ, ಕಾರ್ಯಕ್ರಮವನ್ನೂ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಹರಿಸಿಂಗ್ ದಿಲ್ಲೋನ್ ಕಾರ್ಯಕ್ರಮವನ್ನೂ ಉದ್ದೇಶಿಸಿ ಭಾಷಣ ಆರಂಭಿಸುವ ವೇಳೆ ಭಾರತ್ ಮಾತಾ ಕಿ ಜೈ ಎಂದು ಹೇಳುವ ಮೂಲಕ ನಾವು ನಮ್ಮ ಮಾತನ್ನೂ ಆರಂಭಿಸುತ್ತೇವೆ. ಆದರೆ, ನಾನೂ ಏನೋ ತಪ್ಪು ಮಾಡಿನಾಡಿದ್ಧೇನೆ ಎನ್ನುವ ಹಾಗೆ ಸಂಸದ ಡ್ಯಾನಿಶ್ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹರಿಸಿಂಗ್ ದಿಲ್ಲೋನ್ ಕಿಡಿಕಾರಿದ್ಧಾರೆ.
ದಿಲ್ಲೋನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದ ಡ್ಯಾನಿಶ್ ಅಲಿ ಬಿಜೆಪಿಯವರು ಪ್ರತಿಯೊಂದು ಸರ್ಕಾರಿ ಕಾರ್ಯಕ್ರವನ್ನೂ ತಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಆದರೆ, ಈ ವಿಚಾರವನ್ನೂ ಬಿಜೆಪಿಯವರೂ ತಿರುಚುವ ಮೂಲಕ ಜನತೆಗೆ ಬೇರೊಂದು ಸಂದೇಶವನ್ನೂ ರವಾನಿಸಲು ಪ್ರಯತ್ನಿಸುತ್ತಿದ್ಧಾರೆ ಎಂದು ಸಂಸದ ಡ್ಯಾನಿಶ್ ಅಲಿ ಆರೋಪಿಸಿದ್ದಾರೆ.