ನ್ಯೂಸ್

ಪ್ರಾಣ ಉಳಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದ ಮರಿ ಡಾಲ್ಫಿನ್​: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

ಬೀಜಿಂಗ್​: ಡಾಲ್ಫಿನ್​ ಮಾನವೀಯ ಗುಣಗಳನ್ನು ಹೊಂದಿರುವ ಸ್ನೇಹ ಜೀವಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಪೂರ್ವ ಚೀನಾದ ಝೆಜಿಯಾಂಗ್​ ಪ್ರದೇಶದ ಸಮುದ್ರ ದಡದಲ್ಲಿ ಸಿಲುಕಿಕೊಂಡಿದ್ದ ಡಾಲ್ಫಿನ್​ ಮರಿಯನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಡಾಲ್ಫಿನ್​ ಕೂಡ ಪ್ರಾಣ ಉಳಿಸಿದ ವ್ಯಕ್ತಿಯ ಬಳಿಬಂದು ಕೃತಜ್ಞತೆ ಸಲ್ಲಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋವನ್ನು ಪೀಪಲ್ಸ್​ ಡೈಲಿ ಚೀನಾ ಮಾಧ್ಯಮ ತನ್ನ ಟ್ವಿಟರ್​ ಖಾತೆಯಲ್ಲಿ ನಿನ್ನೆ (ಗುರುವಾರ)ಯಷ್ಟೇ ಶೇರ್​ ಮಾಡಿಕೊಂಡಿದ್ದು, ಈವರೆಗೆ ಬರೋಬ್ಬರಿ 21 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿ ಮುನ್ನುಗ್ಗುತ್ತಿದೆ. (ಏಜೆನ್ಸೀಸ್​)