ಬೆಂಗಳೂರು : ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಪರಿಣಾಮ ಇದೀಗ ದರ್ಶನ್, ಪವಿತ್ರಾ ಗೌಡ ಜೊತೆ 7 ಜನರು ಮತ್ತೆ ಜೈಲು ಪಾಲಾಗಿದ್ದಾರೆ. ಇದಕ್ಕೂ ಮುನ್ನ ನಟಿ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ತೀರ್ಪು ಸಿಗಲಿ ಎಂದು ಹೇಳಿದ್ದರು. ಈ ಹೇಳಿಕೆ ರಮ್ಯಾ ಅವರನ್ನು ನಾನಾ ಟೀಕೆಗೆ ಗುರಿ ಮಾಡಿಸಿತ್ತು. ಇದೀಗ ಈ ಎಲ್ಲದರ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: 'ದೆಹಲಿ ಅಭಿವೃದ್ಧಿ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ'; ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಬಳಿಕ ಮೋದಿ ಮಾತು; Dwarka Expressway
ಇತ್ತೀಚೆಗೆ ಹೆಣ್ಣುಮಕ್ಕಳ ಸೇಫ್ಟಿ ಆಗಲಿ, ಹೆಣ್ಣುಮಕ್ಕಳ ಬಗ್ಗೆ ಗೌರವ ಇಲ್ಲ. ರೂಲ್ಸ್ ಇರುತ್ತೆ, ರೆಗ್ಯುಲೇಷನ್ ಇರುತ್ತೆ. ನಾವು ಅದನ್ನು ಫಾಲೋ ಮಾಡಿದರೆ ಮಾತ್ರ ನಾಗರಿಕತೆ ಇರೋದು. ನಾವೇ ಕಾನೂನು ಕೈಗೆ ತಗೊಂಡ್ರೆ ಈ ರೀತಿ ಕೆಟ್ಟ ಕೆಲಸ ಆಗುತ್ತದೆ. ನಾನು ದರ್ಶನ್ ಅವರೊಂದಿಗೆ ಕೆಲಸ ಮಾಡಿದ್ದೇನೆ, ಅವರು ಗೊತ್ತಿರೋರು, ಕೆಲವೊಂದು ಕಡೆ ಬೇಜಾರು ಏನಂದ್ರೆ ಅವರ ಜೀವನ ಅವರು ಹಾಳು ಮಾಡಿಕೊಂಡರು. ಅವರು ಹೇಗೆ ಇಂಡಸ್ಟ್ರಿಗೆ ಬಂದರು ಎನ್ನುವುದನ್ನೆಲ್ಲ ಶೇರ್ ಮಾಡಿದ್ದರು.
ದೂರು ಕೊಟ್ಟ ಮೇಲೆ ನನಗೆ ಇದೀಗ ಕೆಟ್ಟ ಕಾಮೆಂಟ್ಗಳು ಬರುತ್ತಿಲ್ಲ. ಹೆಣ್ಣು ಮಕ್ಕಳಿಗೆ ಧೈರ್ಯ ಬಂದಿದೆ. ಎಷ್ಟೋ ಜನ ಫೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಅನ್ನು ಹಲವು ಮಂದಿ ಅರೆಸ್ಟ್ ಆಗಿದ್ದಾರೆ. ನಾನು ಹೇಳೋದು ಇಷ್ಟೇ ಜೀವನದಲ್ಲಿ ಏನಾದ್ರೂ ಒಳ್ಳೆದು ಮಾಡಿ. ಮಹಿಳೆಯರಿಗೆ, ತಂದೆ ತಾಯಿಗೆ ಗೌರವ ಕೋಡೋದನ್ನು ಕಲಿಯಿರಿ. ಒಳ್ಳೆಯ ಕೆಲಸ ಹುಡುಕಿ ಬ್ಯುಸಿಯಾಗಿರಿ ಎಂದು ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: ರೈಲು ಪ್ರಯಾಣದ ವೇಳೆ ವಿಚಿತ್ರ ಘಟನೆ; ಟಿಕೆಟ್ ಕೇಳಿದ ಟಿಸಿಗೆ ಯುವತಿ ಮಾಡಿದ್ದೇನು ಗೊತ್ತಾ? Indian Railways Ticket
(ಏಜೆನ್ಸೀಸ್)
ಲೈಟ್ ಬಾಯ್ ಆಗಿ ಕೆಲಸ ಮಾಡಿ ಕಷ್ಟಪಟ್ಟು ಮೇಲೆ ಬಂದವರು. ನನಗೆ ಅದರ ಬಗ್ಗೆ ಹೆಮ್ಮೆ ಇತ್ತು. ಆದರೆ ಇತ್ತೀಚಿನ ನಡವಳಿಕೆ ನೋಡಿ ನನಗೆ ಬೇಜಾರಾಯ್ತು. ಅವರ ಅಕ್ಕ ಪಕ್ಕ ಒಳ್ಳೆಯವರಿಲ್ವಾ ಗೊತ್ತಿಲ್ಲ. . ವಿಶೇಷವಾಗಿ ಸೆಲೆಬ್ರಿಟಿಗಳಿಗೆ ಒಂದು ಹಂತಕ್ಕೆ ಬೆಳೆದ ಬಳಿಕ ನಮಗೆ ಒಳ್ಳೆ ಸಲಹೆ ಕೊಡೋರು ಬೇಕು ಎಂದು ರಮ್ಯಾ ಹೇಳಿದ್ದಾರೆ.