ನ್ಯೂಸ್

2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ… 3ನೇ ಬಾರಿ ಜನತೆ ಯಾಕೆ ಆಶೀರ್ವಾದ ಮಾಡಬಾರದು? ಡಿಕೆಶಿಗೆ ಟಾಂಗ್ ಕೊಟ್ಟ ಎಚ್​ಡಿಕೆ

Bengaluru - General - Rama Kishan K V

ಮಂಡ್ಯ: ರಾಜ್ಯದ ಜನರು ಎರಡು ಬಾರಿ ಅಧಿಕಾರ ನಡೆಸಲು ಅವಕಾಶ ನೀಡಿರುವುದು ನಿಜ. ಮೂರನೇ ಬಾರಿ ಆಶೀರ್ವಾದ ಮಾಡುವುದರಿಂದ ಜನತೆಗೆ ಒಳ್ಳೆಯದಾಗುತ್ತದೆ. ಯಾವುದೋ ದೊಡ್ಡ ಮಾಲ್ ಕಟ್ಟುವ ಸಲುವಾಗಿ ನಾನು ಮತ ಕೇಳುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಟಾಂಗ್ ಕೊಟ್ಟಿದ್ದಾರೆ.

ಜನತೆಯ ಬದುಕು ಸರಿಪಡಿಸಲು ಮತ ಕೇಳುತ್ತಿದ್ದೇವೆ!

ಇತ್ತೀಚೆಗೆ ಡಿಕೆಶಿ ಮಾತನಾಡುತ್ತಾ, ಕುಮಾರಸ್ವಾಮಿಗೆ ಎರಡು ಬಾರಿ ಅವಕಾಶ ನೀಡಿದ್ದೀರಿ. ಈಗ ನನಗೆ ಅವಕಾಶ ನೀಡಿ ಎಂದು ಹೇಳಿದ್ದರು. ಈ ಬಗ್ಗೆ ಎಚ್​​ಡಿಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿ ನಾವು ಜನತೆಯ ಬದುಕು ಸರಿಪಡಿಸಲು ಮತ ಕೇಳುತ್ತಾ ಇದ್ದೇವೆ. ಅವರು ಏನು ಮಾಡುತ್ತೇವೆ ಎಂದು ಮತ ಕೇಳುತ್ತಿದ್ದಾರೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ರೈತರ ಸಾಲ ಮನ್ನಾ ಮಾಡಿದ್ದು ತಪ್ಪಾ?

80 ಶಾಸಕರ ಬೆಂಬಲ‌ ನೀಡಿಯೂ‌ ಎಚ್​ಡಿಕೆ ಸರಿಯಾಗಿ‌ ಉಪಯೋಗಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್​ನ 17 ಜನ ಶಾಸಕರು ಪಕ್ಷಾಂತರವಾಗಿರುವಾಗ ಯಾವ ರೀತಿ ಉಪಯೋಗ ಮಾಡಿಕೊಳ್ಳಲಿ? ನಾನು ಏನು ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಶಾಸಕರು ಪಕ್ಷಾಂತರವಾದರು? ರೈತರ ಸಾಲ ಮನ್ನಾ ಮಾಡಿದ್ದು ತಪ್ಪೇ? ನೀರಾವರಿ ಮಂತ್ರಿಯಾಗಿ ಒಳ್ಳೆಯ ಅವಕಾಶ ದೊರಕಿಸಿಕೊಟ್ಟಿದ್ದು ತಪ್ಪಾ? ಎಂದು ಎಚ್​ಡಿಕೆ ಪ್ರಶ್ನಿಸಿದರು.

ಕಾಂಗ್ರೆಸ್‌ನ ಶಾಸಕರಿಗೆ 19 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಅವರ ಎಲ್ಲಾ ಯೋಜನೆಗಳನ್ನು ಮುಂದುವರೆಸಿದ್ದೆ. ನಾನು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕೊಟ್ಟ ಎಲ್ಲಾ ಭಾಗ್ಯಗಳಿಂದ ಜನ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರಾ? ಎಚ್​ಡಿಕೆ ಕಿಡಿಕಾರಿದರು.