Snake : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.
ಹಾವುಗಳೆಂದರೆ ಮನುಷ್ಯನಿಗೆ ವಿಶೇಷ ಆಸಕ್ತಿ. ಹಾವನ್ನು ಕಂಡರೆ ಭಯಪಟ್ಟರು ಕೂಡ ಹಾವಿನ ಬಗ್ಗೆ ತಿಳಿದುಕೊಳ್ಳಲು ಭಾರಿ ಕುತೂಹಲವೊಂದಿರುತ್ತಾನೆ. ಹೀಗಾಗಿ ಹಾವಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿ, ನೆಟ್ಟಿಗರ ಗಮನ ಸೆಳೆಯುತ್ತದೆ. ಅದೇ ರೀತಿ ಹಾವೊಂದರ ವಿಡಿಯೋ ಇದೀಗ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ನಮ್ಮ ಹಿರಿಯರು ಬಹಳ ಹಿಂದಿನಿಂದಲೂ ಹಾವು ಬಾಲದ ಮೇಲೆ ನಿಲ್ಲಬಲ್ಲದು ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ, ಅನೇಕ ಜನರು ಇದನ್ನು ಒಂದು ಪುರಾಣ ಕತೆ ಎಂದು ಹೇಳುತ್ತಾರೆ. ಆದರೆ, ಸದ್ಯ ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ನಮ್ಮ ಹಿರಿಯರು ಹೇಳಿದ ಮಾತು ನಿಜ ಎನಿಸುವಂತಿದೆ. ಹಾವು ತನ್ನ ಬಾಲದ ಮೇಲೆ ನಿಲ್ಲುತ್ತಿರುವ ವಿಡಿಯೋವನ್ನು 'JKJ Vlog' ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಒಂದು ದೊಡ್ಡ ಕಪ್ಪು ಹಾವು ತನ್ನ ಬಾಲದ ಮೇಲೆ ನಿಂತು, ಬ್ಯಾಲೆನ್ಸ್ ಮಾಡುತ್ತಾ ಗೋಡೆಯನ್ನು ಹತ್ತುವುದನ್ನು ನೋಡಬಹುದಾಗಿದೆ. ಕೆಲವೇ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಈವರೆಗೂ 1 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ. ಅಲ್ಲದೆ, 17 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.
ವಿಡಿಯೋದಲ್ಲಿರುವುದು ಕಾಳಿಂಗ ಸರ್ಪದಂತೆ ಕಾಣುತ್ತದೆ. ಸದ್ಯ ವಿಡಿಯೋ ನೋಡಿದ ಮಂದಿ ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ಇದು ನಂಬಲಸಾಧ್ಯ, ಹಾವು ತನ್ನ ದೇಹದ ಭಾರವನ್ನೆಲ್ಲ ಬಾಲದ ಮೇಲೆ ಹಾಕಿ, ನಿಲ್ಲಬಲ್ಲದೇ ಎಂದು ಹುಬ್ಬೇರಿಸುತ್ತಿದ್ದಾರೆ. ಈ ವಿಡಿಯೋ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)