Honeymoon Murder: ಮನೆ ಮಾಲೀಕನ ಜತೆ ಆಕ್ರಮ ಸಂಬಂಧ ಇದೆ ಎಂದು ಗಂಡನ ತನ್ನ ಪತ್ನಿ ಮೇಲೆ ಆರೋಪ ಮಾಡಿದ್ದಾನೆ. ಈ ಹಿನ್ನೆಲೆ ಆಕೆ, ಹನಿಮೂನ್ ಕೊಲೆ ಮರೆತಿದ್ದೀರಾ? ಅದೇ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣವೊಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಬೆಳಕಿಗೆ ಬಂದಿದೆ.
ಹೌದು, ಪತ್ನಿ ಕಳೆದ 7 ವರ್ಷಗಳಿಂದ ಮನೆ ಮಾಲೀಕನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಅಲ್ಲದೆ, ಇದು ಮದುವೆಯಾದಗಿನಿಂದ ನಾನು ಈ ಪರಿಸ್ಥಿತಿಯಲ್ಲೇ ಒದ್ದಾಡುತ್ತಿದ್ದೇನೆ. ಇದನ್ನು ಇದೀಗ ಬಹಿರಂಗ ಪಡಿಸಿದಾಗ ಬೆದರಿಕೆ ಹಾಕುತ್ತಿದ್ದಾಳೆ ಎಂದು ಗಂಡ ಹೇಳಿದ್ದಾನೆ ವರದಿಯಾಗಿದೆ.
ಅಲ್ಲದೆ, ಈ ಕುರಿತು ದೂರು ದಾಖಲಾಗಿದೆ. ದೀಪಕ್ ಸಾಹು 2019ರಲ್ಲಿ ಆರತಿ ಎಂಬುವವರನ್ನು ವಿವಾಹವಾದನು. ಅವರಿಗೆ 8 ವರ್ಷದ ಮಗನಿದ್ದಾನೆ.ಆದರೆ, ಆಕೆ ಮನೆ ಮಾಲೀಕನಾದ ಸಚಿನ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದಾಗ, ''ಸೋನಮ್-ರಾಜಾವಂಶಿ ಪ್ರಕರಣ ನೀವು ಮರೆತ್ತಿದ್ದೀರಾ? ಅಲ್ಲದೆ, ನಾನು ಮಿರತ್ನ ಮುಸ್ಕಾನ್ ಆಗುತ್ತೇನೆ. 35 ಪೀಸ್ ಮಾಡಿ ಡ್ರಮ್ನಲ್ಲಿ ತುಂಬುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ''.
ನಾನು, ನನ್ನ 8 ವರ್ಷದ ಮಗ ದಿನನಿತ್ಯ ಭಯದ ವಾತಾವರಣದಲ್ಲಿ ಜೀವನ ಮಾಡುವಂತೆ ಆಗಿದೆ. ಹೀಗಾಗಿ, ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ.(ಏಜೆನ್ಸೀಸ್)