ಯುವ ನಾಯಕತ್ವಕ್ಕೆ ಇರಲಿ ಜವಾಬ್ದಾರಿ : ವಕೀಲೆ ಸಮೀಕ್ಷಾ ಭಾಸ್ಕರ ಹೆಗ್ಡೆ ಹೇಳಿಕೆ

New Project (8)
Published on

ಮೂಲ್ಕಿ: ಯುವ ನಾಯಕತ್ವ ಸೇವೆಯೊಂದಿಗೆ ಜವಾಬ್ದಾರಿಯುತ ಪ್ರಜ್ಞೆ ಬೆಳೆಸಿಕೊಂಡು ಮುಂದಿನ ಶ್ರೇಷ್ಠ ನಾಯಕರಾಗಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಶಾಲಾ ಸಂಸತ್ ಸಹಾಯ ಮಾಡುತ್ತದೆ ಎಂದು ವಕೀಲೆ ಸಮೀಕ್ಷಾ ಭಾಸ್ಕರ ಹೆಗ್ಡೆ ಹೇಳಿದರು.

ಮೂಲ್ಕಿ ಕಿಲ್ಪಾಡಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಐಸಿಎಸ್‌ಐ, 2025-26ನೇ ಸಾಲಿನ ಶಾಲಾ ನಾಯಕ, ನಾಯಕಿಯರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪರ ಹಾಗೂ ವಿರೋಧ ಪಕ್ಷದವರು ತಮ್ಮ ಅಧಿಕಾರವನ್ನು ಕರ್ತವ್ಯ ಎಂದು ಭಾವಿಸಿ, ಸಾಮರಸ್ಯದಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಿ ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮೀನಾ ಬಿ.ಎಸ್. ಅಧ್ಯಕ್ಷತೆ ವಹಿಸಿ, ಪದಗ್ರಹಣ ನೆರವೇರಿಸಿದರು. ಪ್ರಾಂಶುಪಾಲೆ ಜೆಸಿಂತಾ ಕ್ರಾಸ್ಟ ಪ್ರಮಾಣ ವಚನ ಬೋಧಿಸಿದರು. ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಟೀನಾ ಫೆರಾವೊ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net