ನ್ಯೂಸ್

ಹಾವು ಆಕಳಿಸುವುದನ್ನು ಎಂದಾದರು ನೋಡಿದ್ದೀರಾ? ನೋಡಿಲ್ಲ ಅಂದ್ರೆ ಇಲ್ಲಿದೆ ನೋಡಿ ವೈರಲ್​ ವಿಡಿಯೋ… Snake Yawning

ನವದೆಹಲಿ: ಹಾವು ( Snake ) ಗಳಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ಕ್ಷಣಾರ್ಧದಲ್ಲೇ ವೈರಲ್​ ಆಗಿಬಿಡುತ್ತವೆ. ಅಂಥದ್ದೆ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಅಂದಹಾಗೆ ನೀವು ಭಯಾನಕ ಪ್ರಾಣಿಗಳ ಬಗ್ಗೆ ಯೋಚಿಸಿದಾಗ ನಿಮ್ಮ ಮನಸ್ಸಿಗೆ ಬರುವ ಜೀವಿಗಳಲ್ಲಿ ಹಾವುಗಳು ಕೂಡ ಒಂದು. ಹಾವುಗಳನ್ನು ಕಂಡೊಡನೆ ಮಾರುದ್ದ ಓಡುವವರೇ ಹೆಚ್ಚು. ಹಾವಿನ ಸಹವಾಸವೇ ನಮಗೆ ಬೇಡ ಎಂದು ದೂರ ಸರಿಯುವವರೇ ಹೆಚ್ಚು. ಆದರೆ, ಹಾವುಗಳೆಂದರೆ ಭಯಪಡುವವರು ಕೂಡ ಹಾವುಗಳ ಕುರಿತಾದ ವೀಡಿಯೋ, ಸಿನಿಮಾ ನೋಡುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಅದರಲ್ಲೂ ಹಾವುಗಳ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ಹೊಂದಿರುತ್ತಾರೆ.

ಇನ್ನು ಆಕಳಿಸುವುದು, ತೂಕಡಿಸುವುದು ಮತ್ತು ತೇಗುವುದು ಎಲ್ಲ ಪ್ರಾಣಿಗಳಲ್ಲೂ ಕಂಡುಬರುತ್ತದೆ. ಹಾವುಗಳು ಕೂಡ ಇದಕ್ಕೆ ಹೊರತಾಗಿಲ್ಲ. ಹಾವು ಆಕಳಿಸು ( Snake Yawning ) ವುದನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿಲ್ಲ ಅಂದರೆ ನಾವಿಂದು ನಿಮಗೆ ತೋರಿಸುತ್ತೇವೆ. ಈ ಕೆಳಗಿನ ವಿಡಿಯೋದಲ್ಲಿ ಹಾವು ಆಕಳಿಸುವ ಅಪರೂಪದ ಕ್ಷಣವನ್ನು ನೀವು ಕಾಣಬಹುದು.

ಅಂದಹಾಗೆ ಹಾವುಗಳು ತಮ್ಮ ಆಯಾಸವನ್ನು ಹೇಗೆ ಅನುಭವಿಸುತ್ತವೆ ಎಂದು ತಿಳಿದಿಲ್ಲದ ಕಾರಣ, ಹಾವುಗಳ ಆಕಳಿಕೆಯನ್ನೇ ಆಯಾಸವೆಂದು ಭಾವಿಸುವುದು ಸಾಮಾನ್ಯವಾಗಿದೆ. ತುಂಬಾ ಆಯಾಸವಾಗಿದ್ದ ಹಾವುಗಳು ಆಕಳಿಸುತ್ತವೆ ಎನ್ನಲಾಗಿದೆ. ಈ ಮೇಲಿನ ವೈರಲ್​ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)