ನ್ಯೂಸ್

ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಂದ ಪಾಗಲ್​ ಪ್ರೇಮಿ

Mandara

ಹಾಸನ: ತಾನು ಪ್ರೀತಿಸಿದ್ದ ಯುವತಿ ಪ್ರೀತಿಗೆ ನಿರಾಕರಿಸಿದಳೆಂಬ ಸಿಟ್ಟಿನಿಂದ ಪಾಗಲ್​ ಪ್ರೇಮಿ ಯುವತಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.


ಸುಷ್ಮಿತಾ (21) ಹತ್ಯೆಗೀಡಾದ ಯುವತಿ. ಈಕೆಯನ್ನು ಅದೇ ಗ್ರಾಮದ ಹೇಮಂತ್​ (25) ಹೆಸರಿನ ಯುವಕ ಪ್ರೀತಿಸುತ್ತಿದ್ದನಂತೆ. ಆದರೆ ಯುವತಿ ಪ್ರೀತಿಗೆ ಒಲ್ಲೆ ಎಂದಿದ್ದಾಳೆ. ಅದೇ ಸಿಟ್ಟಿನಿಂದ ಹೇಮಂತ್​ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ.


ಗುರುವಾರದಂದು ಯುವತಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಏಕಾಏಕಿ ಆಕೆಯ ಮೇಲೆ ಹೇಮಂತ್​ ದಾಳಿ ನಡೆಸಿದ್ದಾನೆ. ಮಚ್ಚಿನಿಂದ ಆಕೆಯನ್ನು ಮನಬಂದಂತೆ ಕೊಚ್ಚಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)