ನವದೆಹಲಿ: ಒಂದೇ ದಿನ ಈವರೆಗಿನ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮತ್ತೆ ಲಾಕ್ಡೌನ್ ಮೋಡ್ಗೆ ಮರಳಿದೆ ಈ ರಾಜ್ಯ. ಶನಿವಾರ ಹಾಗೂ ಭಾನುವಾರಗಳಂದು ಎಲ್ಲ ಕಚೇರಿ ಹಾಗೂ ಅಂಗಡಿಗಳ ಬಂದ್ಗೆ ಆದೇಶಿಸಿದೆ. ಅಗತ್ಯ ವಸ್ತು ಮಾರಾಟ ಹಾಗೂ ಸೇವೆಗಳಿಗೆ ಇದರಿಮದ ವಿನಾಯ್ತಿ ನೀಡಲಾಗಿದೆ.
ಈ ಆದೇಶ ಜಾರಿಗೊಳಿಸಿರುವುದು ಹರಿಯಾಣಾ ರಾಜ್ಯ. ಶುಕ್ರವಾರ ಒಂದೇ ದಿನ 996 ಕೋವಿಡ್ ಪ್ರಕರಣಗಳು ಇಲ್ಲಿ ವರದಿಯಾಗಿವೆ. ಒಂದೇ ದಿನ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಇದಾಗಿದೆ. ಕೋವಿಡ್ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ಇದನ್ನೂ ಓದಿ; ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್ಕಾಂಗ್, ಅಮೆರಿಕ, ಬ್ರಿಟನ್ನಲ್ಲಿವೆ ಹತ್ತಾರು ಕಂಪನಿ…!
ಹರಿಯಾಣದಲ್ಲಿ ಒಟ್ಟಾರೆ ಕೋವಿಡ್ ರೋಗಿಗಳ ಸಂಖ್ಯೆ 50,926ಕ್ಕೆ ತಲುಪಿದೆ. 578 ಜನರು ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಕರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಬುಧವಾರ 994, ಮಂಗಳವಾರ-896 ಹಾಗೂ ಸೋಮವಾರ 887 ಪ್ರಕರಣಗಳು ಪತ್ತೆಯಾಗಿದ್ದವು.
ಒಟ್ಟಾರೆ ರೋಗಿಗಳಲ್ಲಿ 42,793 ಜನರು ಕೋವಿಡ್ನಿಮದ ಚೇತರಿಕೆ ಕಂಡಿದ್ದು, ಸದ್ಯ ರಾಜ್ಯದಲ್ಲಿ 7,555 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಇಲ್ಲಿ ಚೇತರಿಕೆಯ ಪ್ರಮಾಣ ಶೇ.84 ಆಗಿದ್ದರೆ, ಕೋವಿಡ್ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಸಮಯ 33 ದಿನಗಳಾಗಿವೆ.
ಪಂಜಾಬ್ನಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಹರಿಯಾಣದಲ್ಲೂ ಈ ಕ್ರಮಕೈಗೊಳ್ಳಲಾಗುತ್ತಿದೆ. ಪಂಜಾಬ್ನಲ್ಲಿ ರಾತ್ರಿ ಕರ್ಫ್ಯೂ, ವಿಕೇಂಡ್ ಲಾಕ್ಡೌನ್ ಜಾರಿಯಲ್ಲಿದೆ. ಮದುವೆ ಹಾಗೂ ಅಂತ್ರಕ್ರಿಯೆ ಹೊರತುಪಡಿಸಿ ಬೇರೆಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.