More

    ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

    ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಕೋವಿಡ್​ ಕಾಲದಲ್ಲಿ ನಡೆಸಲಾಗುವ ಚುನಾವಣೆಗೆ ಸಂಬಂಧಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬಿಹಾರ​ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.

    ಬಿಹಾರದ ಜತೆಗೆ, ಇತರ ರಾಜ್ಯಗಳಲ್ಲಿ ಚುನಾವಣೆ ಹಾಗೂ ಉಪಚುನಾವಣೆಗಳಿಗೂ ಸಹಜವಾಗಿಯೇ ಇದು ಅನ್ವಯಿಸಲಿದೆ. ರಾಜ್ಯದಲ್ಲಿ ಗ್ರಾಪಂ ಚುನಾವಣೆಗೆ ಮೀಸಲಾತಿ ಪ್ರಕಟಿಸಲಾಗಿದ್ದು, ಈ ಚುನಾವಣೆಗೂ ಇದೇ ಮಾರ್ಗಸೂಚಿ ಅನ್ವಯವಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ; ಕೋವಿಡ್​ನಿಂದ ಮೃತಪಟ್ಟ ಪೌರ ಕಾರ್ಮಿಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ…! 

    ಮನೆಗಳಿಗೆ ತೆರಳಿ ಪ್ರಚಾರ ಮಾಡಲು ಕೇವಲ ಐದು ಜನರಷ್ಟೇ ತೆರಳಬೇಕು. ರೋಡ್​ಶೋಗಳಲ್ಲಿ ಐದು ವಾಹನಗಳಷ್ಟೇ ಇರತಕ್ಕದ್ದು ಎಂದು ನಿರ್ಬಂಧ ವಿಧಿಸಿದೆ.
    ಕರೊನಾ ಸಂಕಷ್ಟದ ನಡುವೆ ಚುನಾವಣೆ ನಡೆಯಲಿರುವ ಮೊದಲ ರಾಜ್ಯ ಬಿಹಾರ ಆಗಿರಲಿದೆ. ಅಕ್ಟೋಬರ್​ ಅಥವಾ ನವೆಂಬರ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಅದಕ್ಕಾಗಿ ಬಿಡುಗಡೆಗೊಳಿಸಿರುವ ಮಾರ್ಗಸೂಚಿಗಳು ಹೀಗಿವೆ.

    • ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಜತೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
    • ಮತದಾನದ ದಿನದಂದು ಮತದಾರನಿಗೆ ವೈರಸ್​ ಇರುವ ಲಕ್ಷಗಳು ಕಂಡುಬಂದಲ್ಲಿ ಆತನಿಗೆ ಟೋಕನ್​ ನೀಡಿ ಮತದಾನ ಮುಗಿಯುವ ವೇಳೆಗೆ ಬಂದು ಮತ ಚಲಾಯಿಸುವಂತೆ ತಿಳಿಸಲಾಗುತ್ತದೆ.
    • ಮತದಾರರು ಸಹಿ ಮಾಡುವಾಗ ಮತಯಂತ್ರದಲ್ಲಿ ಗುಂಡಿ ಒತ್ತುವಾಗ ಅವರಿಗೆ ಕೈಗವಸು ನೀಡಲಾಗುತ್ತದೆ.
    • ಒಂದು ಮತಗಟ್ಟೆಯಲ್ಲಿ ಗರಿಷ್ಠ 1,000 ಜನರಿಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಈ ಮೊದಲು ಈ ಮಿತಿಯನ್ನು 1500 ನಿಗದಿ ಮಾಡಲಾಗಿತ್ತು.
    • ಎಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಗುರುತು ಪತ್ತೆಮಾಡುವ ವೇಳೆ ಕೊಂಚ ಸಮಯ ತೆಗೆದಿರಬೇಕಾಗುತ್ತದೆ.
    • ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳು ಆರೋಗ್ಯಾಧಿಕಾರಿಗಳ ನಿಗಾದಲ್ಲಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕೊನೆಯ ಗಳಿಗೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ.

    ಇದನ್ನೂ ಓದಿ; ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…! 

    ಚುನಾವಣೆ ನಡೆಸುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು, ಮುಖಂಡರು, ತಜ್ಞರಿಂದ ಆಯೋಗ ಸಲಹೆ- ಸೂಚನೆಗಳನ್ನು ಆಹ್ವಾನಿಸಿತ್ತು. ಅವುಗಳನ್ನೆಲ್ಲ ಕ್ರೋಢೀಕರಿಸಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

    ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts