ನ್ಯೂಸ್

ಹೊಸ ವರ್ಷ-2022: ಜಾತ್ರೆ, ಸಾಹಿತ್ಯ, ಕ್ರೀಡೆ, ಸಿನಿಮಾ, ರಜೆ, ರಾಜಕೀಯ ಇತ್ಯಾದಿಗಳ ಮುನ್ನೋಟ

ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ...

ಪ್ರಮುಖ ಜಾತ್ರೆ ಉತ್ಸವಗಳು

ಜನವರಿ 

  • 7 - ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳ ರಥೋತ್ಸವ
  • 14, 15 - ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಹರ ಜಾತ್ರೆ. ಸಿಗಂದೂರು ಶ್ರೀ ಚೌಡೇಶ್ವರಿ ಜಾತ್ರೋತ್ಸವ
  • 17 - ಬಾದಾಮಿ ಬನಶಂಕರಿ ರಥೋತ್ಸವ
  • 18 - ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯೋತ್ಸವ. ಗವಿಮಠದ ಗವಿಸಿದ್ದೇಶ್ವರ ರಥೋತ್ಸವ. ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ. ಶಿಕಾರಿಪುರ ಶ್ರೀ ಮಾರಿಕಾಂಬಾ ಜಾತ್ರೆ
  • 28ರಿಂದ ಫೆ.2ರವರೆಗೆ ಸುತ್ತೂರು ಜಾತ್ರೆ (ಈ ಬಾರಿ ಜ.30 ಒಂದು ದಿನಕ್ಕೆ ಮಾತ್ರ ಜಾತ್ರೆ ಸೀಮಿತ)

ಫೆಬ್ರವರಿ

  • 8, 9 - ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ
  • 14 - ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಜಯಂತ್ಯುತ್ಸವ. ಉಳವಿ ಚನ್ನಬಸವೇಶ್ವರ ಮಹಾರಥೋತ್ಸವ
  • 19 - ಶೃಂಗೇರಿ ಶ್ರೀ ಶಾರದಂಬಾ ರಥೋತ್ಸವ
  • 25-ಕೊಟ್ಟೂರು ಗುರು ಬಸವೇಶ್ವರ ಜಾತ್ರೆ

ಮಾರ್ಚ್​

  • 1, 2 - ಶ್ರೀ ಸಿದ್ಧಾರೂಢ ಮಠದ ಶಿವರಾತ್ರಿ ಜಾತ್ರಾ ಮಹೋತ್ಸವ
  • 2 - ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ -ಸಿದ್ಧಗಂಗಾ ಮಠ
  • 3 - ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಜಾತ್ರೆ
  • 5 - ಹೊರನಾಡು ಅನ್ನಪೂರ್ಣೆಶ್ವರಿ ದೇವಿ ಬ್ರಹ್ಮರಥೋತ್ಸವ
  • 14 - ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ
  • 16 - ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚ ಮಹಾರಥೋತ್ಸವ
  • 20 - ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ
  • 22 - ಶ್ರೀ ಶರಣಬಸವೇಶ್ವರ ರಥೋತ್ಸವ
  • 24 - ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ರಥೋತ್ಸವ

ಏಪ್ರಿಲ್​

  • 21 - ಕೂಡಲ ಸಂಗಮೇಶ್ವರ ರಥೋತ್ಸವ

ಮೇ

  • 4 - ಕಿತ್ತೂರು ಗ್ರಾಮ ದೇವತೆ ದ್ಯಾಮವ್ವನ ಜಾತ್ರೆ (500 ವರ್ಷಗಳ ಬಳಿಕ)

ಆಗಸ್ಟ್

  • 2 - ನಾಗರ ಪಂಚಮಿ
  • 15 - ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ
  • 19 - ಉಡುಪಿ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವ

ಸೆಪ್ಟೆಂಬರ್

  • 13 - ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆ
  • 26ರಿಂದ ಅಕ್ಟೋಬರ್ 5ರವರೆಗೆ ವಿಖ್ಯಾತ ಮೈಸೂರು ದಸರಾ ಮಹೋತ್ಸವ

ಅಕ್ಟೋಬರ್

  • 5 - ವಿಜಯದಶಮಿ ಜಂಬೂಸವಾರಿ
  • 13 -27-ಹಾಸನಾಂಬ ದರ್ಶನೋತ್ಸವ, ಸಿದ್ದೇಶ್ವರ ಜಾತ್ರೆ
  • 17-ತಲಕಾವೇರಿಯಲ್ಲಿ ಪವಿತ್ರ ತೀಥೋದ್ಭವ

ನವೆಂಬರ್

  • 23-ಧರ್ಮಸ್ಥಳ ಲಕ್ಷದೀಪೋತ್ಸವ
  • 29-ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಾರ್ವತ್ರಿಕ ರಜೆಗಳು

ಡಿಸೆಂಬರ್​

  • 2 - ಶಿರೋಳ ಕಾಡಸಿದ್ಧೇಶ್ವರ ಜಾತ್ರೆ

ಸಾರ್ವತ್ರಿಕ ರಜೆಗಳು

  • ಜ.15- ಸಂಕ್ರಾಂತಿ
  • ಜ.26- ಗಣರಾಜ್ಯೋತ್ಸವ
  • ಮಾ.1- ಮಹಾ ಶಿವರಾತ್ರಿ
  • ಏ.2- ಯುಗಾದಿ
  • ಏ.14- ಅಂಬೇಡ್ಕರ್/ ಮಹಾವೀರ ಜಯಂತಿ
  • ಏ.15- ಶುಭ ಶುಕ್ರವಾರ
  • ಮೇ 3- ಬಸವ ಜಯಂತಿ/ ಅಕ್ಷಯ ತೃತೀಯ/ ರಂಜಾನ್
  • ಆ.9- ಮೊಹರಂ ಕಡೇ ದಿನ
  • ಆ.15- ಸ್ವಾತಂತ್ರ್ಯ ದಿನ
  • ಆ.31- ವಿನಾಯಕ ಚತುರ್ಥಿ
  • ಅ.4- ಆಯುಧ ಪೂಜೆ
  • ಅ.5- ವಿಜಯದಶಮಿ
  • ಅ.24- ನರಕ ಚತುರ್ದಶಿ
  • ಅ.26- ಬಲಿಪಾಡ್ಯಮಿ
  • ನ.1- ಕನ್ನಡ ರಾಜ್ಯೋತ್ಸವ
  • ನ.11- ಕನಕದಾಸ ಜಯಂತಿ

ಭಾನುವಾರವೇ ಬಂದಿರುವ ರಜೆಗಳು

  • ಮೇ 1- ಕಾರ್ವಿುಕ ದಿನಾಚರಣೆ
  • ಜು. 10- ಬಕ್ರೀದ್
  • ಸೆ. 25- ಮಹಾಲಯ ಅಮಾವಾಸ್ಯೆ
  • ಅ. 2- ಗಾಂಧಿ ಜಯಂತಿ
  • ಅ. 9- ವಾಲ್ಮೀಕಿ ಜಯಂತಿ/ ಈದ್ ಮಿಲಾದ್
  • ಡಿ. 25- ಕ್ರಿಸ್​ಮಸ್​

ದೇಶ

ಸಪ್ತರಾಜ್ಯಗಳ ಚುನಾವಣೆ

  • 2021ರಲ್ಲಿ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದವು. 2022ರಲ್ಲಿ ಏಳು ರಾಜ್ಯಗಳ ಚುನಾವಣೆ ನಡೆಯಲಿದ್ದು, ವೇಳಾಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. = ಉತ್ತರಪ್ರದೇಶ = ಗೋವಾ = ಪಂಜಾಬ್ = ಉತ್ತರಾಖಂಡ = ಗುಜರಾತ್ = ಮಿಜೋರಾಂ = ಹಿಮಾಚಲ ಪ್ರದೇಶ
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರಿಪ್ಟೋ ಕರೆನ್ಸಿ ಕುರಿತಂತೆ ಸೂಕ್ತ ನಿಯಮ ರೂಪಿಸುವ ಸಾಧ್ಯತೆ.
  • ಕರೊನಾದಿಂದ ಕುಸಿತ ಕಂಡಿದ್ದ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣಲಿದೆ. ಐದಕ್ಕೂ ಹೆಚ್ಚು ಪ್ರಮುಖ ಕಂಪನಿಗಳು 2022ರ ಮೊದಲ ಮೂರು ತಿಂಗಳಲ್ಲೇ ಹೊಸ ಕಾರುಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
  • ಷೇರುಮಾರುಕಟ್ಟೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಹಲವು ಕಂಪನಿಗಳ ಹೊಸ ಐಪಿಒಗಳು ಮಾರುಕಟ್ಟೆಗೆ ಬರಲಿವೆ.
  • 2021ರಲ್ಲಿ ಕರೊನಾ ಕಾರಣದಿಂದ ದುಬೈ, ಸುತ್ತಲ ರಾಷ್ಟ್ರಗಳಲ್ಲಿ ನಡೆದಿದ್ದ ಐಪಿಎಲ್ ಈ ವರ್ಷ ಭಾರತದಲ್ಲೇ ನಡೆಯಲಿದೆ.

ಚಂದ್ರಯಾನ-3: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ಈ ವರ್ಷದಲ್ಲಿ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಕ್ರೀಡೆ

ಐಪಿಎಲ್-15

  • ಏಪ್ರಿಲ್-ಮೇ
  • ತಂಡಗಳು: 10
  • ಪಂದ್ಯಗಳು: 72

ಕಿರಿಯರ ಏಕದಿನ ಕ್ರಿಕೆಟ್​ವಿಶ್ವಕಪ್

  • ಜನವರಿ 14, ಫೆಬ್ರವರಿ 5
  • ಎಲ್ಲಿ: ವೆಸ್ಟ್ ಇಂಡೀಸ್
  • ತಂಡಗಳು: 16
  • ಪಂದ್ಯಗಳು: 48

ಟಿ20 ಕ್ರಿಕೆಟ್ ವಿಶ್ವಕಪ್

  • ಅಕ್ಟೋಬರ್ 16- ನವೆಂಬರ್ 13
  • ಎಲ್ಲಿ: ಆಸ್ಟ್ರೇಲಿಯಾ
  • ತಂಡಗಳು: 16
  • ಪಂದ್ಯಗಳು: 45

ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್

  • ಮಾರ್ಚ್ 4-ಏಪ್ರಿಲ್ 3
  • ಎಲ್ಲಿ ನ್ಯೂಜಿಲೆಂಡ್
  • ತಂಡಗಳು: 8
  • ಪಂದ್ಯಗಳು: 31

ರಣಜಿ ಟ್ರೋಫಿ

  • ಜನವರಿ 13-ಮಾರ್ಚ್ 20
  • ತಂಡಗಳು: 38
  • ಗುಂಪುಗಳು: 6
  • ಪಂದ್ಯಗಳು: 177

ಟೆನಿಸ್

  • ಆಸ್ಟ್ರೇಲಿಯನ್ ಓಪನ್: ಜನವರಿ 17-30
  • ಫ್ರೆಂಚ್ ಓಪನ್: ಮೇ 22-ಜೂನ್ 5
  • ವಿಂಬಲ್ಡನ್: ಜೂನ್ 27-ಜುಲೈ 10
  • ಯುಎಸ್ ಓಪನ್: ಆಗಸ್ಟ್ 29-ಸೆಪ್ಟೆಂಬರ್ 11

ಬ್ಯಾಡ್ಮಿಂಟನ್

  • ಆಲ್ ಇಂಗ್ಲೆಂಡ್ ಚಾಂಪಿಯನ್​ಷಿಪ್: ಮಾರ್ಚ್ 16-20, ಎಲ್ಲಿ: ಬರ್ವಿುಂಗ್​ಹ್ಯಾಂ
  • ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಜನವರಿ 11-16, ಎಲ್ಲಿ: ನವದೆಹಲಿ
  • ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್: ಆಗಸ್ಟ್ 21-28, ಎಲ್ಲಿ: ಟೋಕಿಯೊ

ಫಿಫಾ ವಿಶ್ವಕಪ್

  • ನವೆಂಬರ್ 22-ಡಿಸೆಂಬರ್ 18
  • ಎಲ್ಲಿ: ಕತಾರ್ ತಂಡಗಳು: 32
  • ಪಂದ್ಯಗಳು: 64

19ನೇ ಏಷ್ಯನ್ ಗೇಮ್್ಸ

  • ಸೆಪ್ಟೆಂಬರ್ 10-25
  • ಎಲ್ಲಿ: ಹಂಗ್​ಝೌ(ಚೀನಾ)
  • ಕ್ರೀಡೆ: 40
  • ಸ್ಪರ್ಧೆ: 482
  • ದೇಶಗಳು: 45

ಚಳಿಗಾಲದ ಒಲಿಂಪಿಕ್ಸ್

  • ಫೆಬ್ರವರಿ 4-20
  • ಎಲ್ಲಿ: ಬೀಜಿಂಗ್ (ಚೀನಾ)
  • ಸ್ಪರ್ಧೆ: 109
  • ದೇಶಗಳು: 84

ಕಾಮನ್ವೆಲ್ತ್ ಗೇಮ್ಸ್​

  • ಎಲ್ಲಿ: ಬರ್ವಿುಂಗ್​ಹ್ಯಾಂ (ಇಂಗ್ಲೆಂಡ್)
  • ಜುಲೈ 28-ಆಗಸ್ಟ್ 8
  • ಕ್ರೀಡೆ: 20
  • ಸ್ಪರ್ಧೆಗಳು: 283
  • ದೇಶಗಳು: 72

ಸಿನಿ ರಂಗು

ಬಿಡುಗಡೆ ಆಗಲಿರುವ ಪ್ರಮುಖ ಸಿನಿಮಾಗಳು

ಕನ್ನಡ

  • ಸುದೀಪ್- ವಿಕ್ರಾಂತ್ ರೋಣ
  • ಯಶ್- ಕೆಜಿಎಫ್ 2
  • ಶಿವರಾಜಕುಮಾರ್- ಬೈರಾಗಿ, ವೇದ, ನೀ ಸಿಗೋವರೆಗೂ
  • ಉಪೇಂದ್ರ- ಕಬ್ಜ, ಬುದ್ಧಿವಂತ 2
  • ಶ್ರೀಮುರಳಿ- ಬಘೀರ
  • ರಕ್ಷಿತ್ ಶೆಟ್ಟಿ- 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ
  • ಧ್ರುವ ಸರ್ಜಾ- ಮಾರ್ಟಿನ್
  • ರವಿಚಂದ್ರನ್- ರವಿ ಬೋಪಣ್ಣ
  • ಗಣೇಶ್- ಗಾಳಿಪಟ 2
  • ಪುನೀತ್- ಜೇಮ್ಸ್, ಲಕ್ಕಿಮ್ಯಾನ್

ತೆಲುಗು

  • ಜೂ. ಎನ್​ಟಿಆರ್, ರಾಮ್​ಚರಣ್​ ತೇಜ- ಆರ್​ಆರ್​ಆರ್
  • ಪವನ್ ಕಲ್ಯಾಣ್- ಭಿಮ್ಲಾ ನಾಯ್ಕ್​
  • ಚಿರಂಜೀವಿ- ಆಚಾರ್ಯ
  • ಪ್ರಭಾಸ್- ರಾಧೆ ಶ್ಯಾಮ್ ಆದಿಪುರುಷ್, ಸಲಾರ್

ತಮಿಳು

  • ಕಮಲ್ ಹಾಸನ್- ಇಂಡಿಯನ್ 2, ವಿಕ್ರಂ
  • ವಿಜಯ್- ಬೀಸ್ಟ್
  • ಅಜಿತ್- ವಾಲಿಮೈ

ಹಿಂದಿ

  • ಅಕ್ಷಯ್ ಕುಮಾರ್- ಬಚ್ಚನ್ ಪಾಂಡೆ, ಪೃಥ್ವಿರಾಜ್, ರಕ್ಷಾ ಬಂಧನ್
  • ಅಮಿತಾಭ್ ಬಚ್ಚನ್ - ಬ್ರಹ್ಮಾಸ್ತ್ರ
  • ಶಾರುಖ್ ಖಾನ್- ಪಠಾಣ್
  • ಆಮೀರ್ ಖಾನ್-ಲಾಲ್ ಸಿಂಗ್ ಛಡ್ಡಾ
  • ರಣವೀರ್ ಸಿಂಗ್ - ಸರ್ಕಸ್, ಜಯೇಶ್ ಭಾಯ್ ಜೋರ್​ಧಾರ್,
  • ರಣವೀರ್ ಕಪೂರ್- ಶಮ್ೇರ
  • ಅಜಯ್ ದೇವಗನ್- ಮೈದಾನ್, ರನ್ ವೇ 34
  • ಟೈಗರ್ ಶ್ರಾಫ್- ಹೀರೋಪಂತಿ 2
  • ಹೃತಿಕ್ ರೋಷನ್- ವಿಕ್ರಂ ವೇದ ರಿಮೇಕ್
  • ಕಂಗನಾ- ದಾಖಡ್, ತೇಜಸ್