ನ್ಯೂಸ್

ಯುಎಸ್​ನಲ್ಲೂ 'ಹನು-ಮಾನ್'​ ಸದ್ದು! ಕೇವಲ 4 ದಿನಕ್ಕೆ ಮೈಲಿಗಲ್ಲು ಸಾಧಿಸಿದ ತೇಜ ಸಜ್ಜ ಚಿತ್ರ

ಅಮೆರಿಕಾ: ಯಂಗ್ ಹೀರೋ ತೇಜ ಸಜ್ಜ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಹನು-ಮಾನ್'​ ಚಿತ್ರವು ಬಿಡುಗೊಂಡು ಇಂದಿಗೆ ನಾಲ್ಕು ದಿನಗಳು ಕಳೆದಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆಯುವುದರ ಜತೆಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರದ ವಿಎಫ್​ಎಕ್ಸ್​ ಕೆಲಸಕ್ಕೆ ವಿಶೇಷ ಮೆಚ್ಚುಗೆ ಲಭಿಸುತ್ತಿದ್ದು, ಈಗಾಗಲೇ ದೇಶ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ಹಿಂದಿನ ದಾಖಲೆಗಳನ್ನು ಮುರಿದು ಮುನ್ನಗ್ಗುತ್ತಿದೆ.

ಆಶ್ಚರ್ಯಕರ ರೀತಿಯಲ್ಲಿ ಅಮೆರಿಕಾ ಬಾಕ್ಸ್​ ಆಫೀಸ್​ನಲ್ಲಿ ತೇಜ ಸಜ್ಜ ನಟನೆಯ ಈ ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ 3 ಮಿಲಿಯನ್ ಡಾಲರ್​ ತಲುಪಿದ್ದು, ಹೆಚ್ಚುವರಿ ಶೋಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಸಿನಿಮಾಗಳ ದಾಖಲೆಗಳನ್ನು 'ಹನು-ಮಾನ್​' ಹಿಂದಿಕ್ಕಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಅನುದೀಪ್ ದೇವ್, ಕೃಷ್ಣ ಸೌರಭ್ ಅವರ ಸಂಗೀತವಿದ್ದು, ಅಮೃತಾ ಅಯ್ಯರ್, ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್, ಸಮುದ್ರಕಣಿ, ಗೆಟಪ್ ಶ್ರೀನು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).