ನ್ಯೂಸ್

25ನೇ ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಮೈಲಿಗಲ್ಲು ಸಾಧಿಸಿದ 'ಹನು-ಮ್ಯಾನ್'​! ಇಲ್ಲಿದೆ ಸಂಪೂರ್ಣ ಕಲೆಕ್ಷನ್​ ವಿವರ

ಮುಂಬೈ: ಸೂಪರ್​ ಹೀರೋ ತೇಜ ಸಜ್ಜ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಕಾಂಬಿನೇಷನ್​ನಲ್ಲಿ ಮೂಡಿಬಂದ ಪ್ಯಾನ್​ ಇಂಡಿಯಾ ‘ಹನು-ಮ್ಯಾನ್’ ರಿಲೀಸ್​ ಆದ ಮೊದಲ ದಿನದಿಂದಲೂ ಸಿನಿಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್​ ಪಡೆಯುವುದರ ಜತೆಗೆ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಭರ್ಜರಿ ದಾಖಲೆ ನಿರ್ಮಿಸಿದೆ. ಆಕರ್ಷಕ ವಿಎಫ್​​ಎಕ್ಸ್​ ಕೆಲಸಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಉತ್ತಮ ವಿಮರ್ಶೆ ಹಾಗೂ ಗಳಿಕೆಯನ್ನು ಸ್ವೀಕರಿಸಿದೆ.

ಸದ್ಯ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ, ಉತ್ತಮ ಪ್ರದರ್ಶನಗಳನ್ನು ಕಾಣುತ್ತಿರುವ 'ಹನು-ಮ್ಯಾನ್'​, ಇದೀಗ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾ ಬಾಕ್ಸ್ ಆಫೀಸ್​ನಲ್ಲಿ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್​ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಸೂಪರ್​ ಹೀರೋ ನಟ ತೇಜ ಸಜ್ಜ ಮತ್ತು ನಟಿ ಅಮೃತಾ ಅಯ್ಯರ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಹನು-ಮ್ಯಾನ್​' ಇದೀಗ ಜಾಗತಿಕವಾಗಿ 300 ಕೋಟಿ ಕ್ಲಬ್​ ಸೇರಿದ್ದು, ಚಿತ್ರತಂಡಕ್ಕೆ ಭಾರೀ ಯಶಸ್ಸನ್ನು ತಂದೊಡ್ಡಿದೆ. ಬ್ಲಾಕ್​ಬಸ್ಟರ್​ ಚಿತ್ರದ ಒಟ್ಟು 25 ದಿನಗಳ ಸಂಪೂರ್ಣ ಗಳಿಕೆಯ ವಿವರ ಹೀಗಿದೆ.

ದಿನ 1 - 21.35 ಕೋಟಿ ರೂ.

ದಿನ 2 - 29.72 ಕೋಟಿ ರೂ.

ದಿನ 3 - 24.16 ಕೋಟಿ ರೂ.

ದಿನ 4 - 25.63 ಕೋಟಿ ರೂ.

ದಿನ 5 - 19.57 ಕೋಟಿ ರೂ.

ದಿನ 6 - 15.40 ಕೋಟಿ ರೂ.

ದಿನ 7 - 14.75 ಕೋಟಿ ರೂ.

ದಿನ 8 - 14.20 ಕೋಟಿ ರೂ.

ದಿನ 9 - 20.37 ಕೋಟಿ ರೂ.

ದಿನ 10 - 23.91 ಕೋಟಿ ರೂ.

ದಿನ 11 - 9.36 ಕೋಟಿ ರೂ.

ದಿನ 12 - 7.20 ಕೋಟಿ ರೂ.

ದಿನ 13 - 5.65 ಕೋಟಿ ರೂ.

ದಿನ 14 - 4.95 ಕೋಟಿ ರೂ.

ದಿನ 15 - 11.34 ಕೋಟಿ ರೂ.

ದಿನ 16 - 9.27 ಕೋಟಿ ರೂ.

ದಿನ 17 - 12.89 ಕೋಟಿ ರೂ.

ದಿನ 18 - 3.06 ಕೋಟಿ ರೂ.

ದಿನ 19 - 2.87 ಕೋಟಿ ರೂ.

ದಿನ 20 - 2.71 ಕೋಟಿ ರೂ.

ದಿನ 21 - 2.52 ಕೋಟಿ ರೂ.

ದಿನ 22 - 2.34 ಕೋಟಿ ರೂ.

ದಿನ 23 - 6.83 ಕೋಟಿ ರೂ.

ದಿನ 24 - 7.21 ಕೋಟಿ ರೂ.

ದಿನ 25 - 2.97 ಕೋಟಿ ರೂ.

ಒಟ್ಟು - 300.23 ಕೋಟಿ ರೂ.,(ಏಜೆನ್ಸೀಸ್).