ನ್ಯೂಸ್

ಕೇವಲ ಅರ್ಧ ಕೆಜಿ ಚಿಕನ್​ಗೆ 5,500 ರೂಪಾಯಿ! ರೆಸ್ಟೋರೆಂಟ್ ಸಿಬ್ಬಂದಿ ಕೊಟ್ಟ ಕಾರಣ ಕೇಳಿ ದಂಗಾದ ಗ್ರಾಹಕ! Chicken

Chicken : ಚೀನಾದ ಶಾಂಘೈ ನಗರದಲ್ಲಿರುವ ರೆಸ್ಟೋರೆಂಟ್ ಒಂದು ಅರ್ಧ ಕೆಜಿ ಚಿಕನ್​ ಖಾದ್ಯಕ್ಕೆ ದುಬಾರಿ ಬೆಲೆ ವಿಧಿಸಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಅರ್ಧ ಕೆಜಿ ಕೋಳಿ ಮಾಂಸದ ಖಾದ್ಯಕ್ಕೆ 480 ಯುವಾನ್ ( 5,500 ರೂಪಾಯಿ ) ವಿಧಿಸಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿದು ಜನರು ಶಾಕ್​ ಆಗಿದ್ದಾರೆ. ಈ ವಿಶೇಷ ಖಾದ್ಯವನ್ನು ಸಂಗೀತವನ್ನು ಕೇಳಿ, ಹಾಲು ಕುಡಿದು ಬೆಳೆದ ಕೋಳಿ ಮಾಂಸದಿಂದ ತಯಾರಿಸಲಾಗಿದೆಯಂತೆ. ಆದ್ದರಿಂದ ಇದರ ಬೆಲೆ ಹೆಚ್ಚೇನೂ ಇಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ 2,70,000 ಫಾಲೋವರ್ಸ್​ ಹೊಂದಿರುವ ಉದ್ಯಮಿಯೊಬ್ಬರು ಮಾರ್ಚ್ 14ರಂದು ಶಾಂಘೈ ಕ್ಲಬ್ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕೋಳಿ ಮಾಂಸದಿಂದ ತಯಾರಿಸಲಾದ ಖಾದ್ಯವನ್ನು ಅವರಿಗೆ ನೀಡಲಾಗಿದೆ. ಅದರ ಬೆಲೆಯನ್ನು ನೋಡಿ ದಂಗಾದ ಉದ್ಯಮಿ, ಕಾರಣವನ್ನು ಕೇಳಿದ್ದಾರೆ. ಈ ವೇಳೆ ಅವರು ಕೊಟ್ಟ ಉತ್ತರ ಉದ್ಯಮಿಯನ್ನು ಮತ್ತಷ್ಟು ದಂಗುಬಡಿಸಿದೆ.

ರೆಸ್ಟೋರೆಂಟ್​ ಸಿಬ್ಬಂದಿ ಆ ಕೋಳಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಿದರು. ಕೋಳಿ "ಸೂರ್ಯಕಾಂತಿ ಕೋಳಿ" ಎಂದು ಕರೆಯಲ್ಪಡುವ ಅಪರೂಪದ ತಳಿಯಾಗಿದ್ದು, ಇದು ಗುವಾಂಗ್‌ಡಾಂಗ್ ಪ್ರಾಂತ್ಯದ ಒಂದು ತೋಟದಿಂದ ಮಾತ್ರ ಲಭ್ಯವಿದೆ. ಫಾರ್ಮ್‌ನ ಆನ್‌ಲೈನ್ ವಿವರಣೆಯ ಪ್ರಕಾರ, ಸೂರ್ಯಕಾಂತಿ ಕೋಳಿಗೆ ಸೂರ್ಯಕಾಂತಿ ಕಾಂಡಗಳು ಮತ್ತು ಒಣಗಿದ ಹೂವಿನ ತಲೆಗಳಿಂದ ತೆಗೆದ ರಸವನ್ನು ಒಳಗೊಂಡಿರುವ ಆಹಾರವನ್ನು ನೀಡಲಾಗುತ್ತದೆ. ಇದು ಹಳದಿ ಕೋಳಿ ತಳಿಯಾಗಿದ್ದು, ಇದನ್ನು ಚಕ್ರವರ್ತಿ ಕೋಳಿ ಎಂದೂ ಕರೆಯುತ್ತಾರೆ.

ಸೂರ್ಯಕಾಂತಿ ಕೋಳಿಯನ್ನು ಹೆಚ್ಚು ಪ್ರೀಮಿಯಂ ಎಂದು ಪರಿಗಣಿಸಲಾಗುತ್ತದೆ. ವರದಿಯ ಪ್ರಕಾರ ಪ್ರತಿ ಕಿಲೋಗ್ರಾಂಗೆ 200 ಯುವಾನ್ (ರೂ. 2,300) ಗಿಂತ ಹೆಚ್ಚು ಬೆಲೆಯಿದೆ ಮತ್ತು ರೆಸ್ಟೋರೆಂಟ್‌ಗಳಲ್ಲಿ, ಒಂದು ಕೋಳಿಯ ಬೆಲೆ 1,000 ಯುವಾನ್ (ರೂ. 11,500) ಕ್ಕಿಂತ ಹೆಚ್ಚಿದೆ. (ಏಜೆನ್ಸೀಸ್​)