Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ ಜನರು ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲು ಮತ್ತು ಶಾಖದಿಂದಾಗಿ ಅನೇಕರು ತೀವ್ರ ಬಳಲಿಕೆಯನ್ನು ಅನುಭವಿಸುತ್ತಿದ್ದಾರೆ. ಬಿಸಿಲಿನ ಶಾಖವನ್ನು ನಿಭಾಯಿಸಲು ಬಹುತೇಕರು ಎಸಿ ಮತ್ತು ಕೂಲರ್‌ಗಳನ್ನು ಬಳಸಲು ಪ್ರಾರಂಭಿಸಿದ್ದು, ತಂಪು ಪಾನೀಯಗಳು ಮತ್ತು ನೀರಿನ ಕಾಕ್ಟೇಲ್‌ಗಳ ಮೊರೆ ಹೋಗುತ್ತಿದ್ದಾರೆ.
ಇನ್ನು ಬೇಸಿಗೆಯಲ್ಲಿ ಎಲ್ಲರೂ ಕಲ್ಲಂಗಡಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ, ಈ ಹಣ್ಣು ಹೆಚ್ಚಾಗಿ ಸಿಗುತ್ತದೆ. ಅಲ್ಲದೆ, ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ಬೇಸಿಗೆಯ ಬಳಲಿಕೆಯನ್ನು ನಿವಾರಿಸಿಕೊಳ್ಳಲು ಕಲ್ಲಂಗಡಿ ಹಣ್ಣಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಇದೆ. ಆದರೆ, ಖರೀದಿ ಮಾಡುವಾಗ ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿದರೆ, ಮನೆಗೆ ರುಚಿಯಿಲ್ಲದ, ಕೆಟ್ಟು ಹೋದ ಹಣ್ಣನ್ನು ತರಬೇಕಾಗುತ್ತದೆ ಎಚ್ಚರ. ಹಾಗಾದರೆ, ಹಣ್ಣನ್ನು ಖರೀದಿ ಮಾಡುವಾಗ ಅನುಸರಿಸಬೇಕಾದ ತಂತ್ರ ಯಾವುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಇತ್ತೀಚೆಗೆ ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚು ರುಚಿಕರವಾಗಿಸಲು ಮತ್ತು ವೇಗವಾಗಿ ಹಣ್ಣಾಗಿಸಲು ಇಂಜೆಕ್ಷನ್‌ಗಳನ್ನು ಬಳಸುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ, ಇಲಿ ಮತ್ತು ಹೆಗ್ಗಣಗಳು ಕಚ್ಚಿದ ಹಣ್ಣುಗಳನ್ನು ಅಂಗಡಿಯವರು ಮಾರಾಟ ಮಾಡುತ್ತಿರುವುದು ಕೂಡ ಬಹಿರಂಗವಾಗಿದೆ. ಹಾಗಾದ್ರೆ, ರಾಸಾಯನಿಕಗಳಿಂದ ಮುಕ್ತವಾದ ಉತ್ತಮ ಹಣ್ಣುಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ಆತ ಆಡೋದು ಗ್ಯಾರಂಟಿ… CSK ವಿರುದ್ಧದ ಪಂದ್ಯಕ್ಕೂ ಮುನ್ನವೇ RCB ಅಭಿಮಾನಿಗಳಿಗೆ ಗುಡ್ ನ್ಯೂಸ್! RCB
ಸಾಮಾನ್ಯವಾಗಿ, ಒಳ್ಳೆಯ ಕಲ್ಲಂಗಡಿಗಳು ದಪ್ಪವಾಗಿದ್ದು, ಸ್ವಲ್ಪ ಹಳದಿ ಛಾಯೆಯನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಚೆನ್ನಾಗಿ ಮಾಗಿದ ಹಣ್ಣಿನ ಮೇಲಿನ ಹಸಿರು ಪಟ್ಟೆಗಳು ಬೆರಳಿನಷ್ಟು ಅಗಲವಾಗಿರುತ್ತವೆ. ತೆಳುವಾದ ಪಟ್ಟೆಗಳನ್ನು ಹೊಂದಿರುವ ಹಣ್ಣುಗಳು ಕಡಿಮೆ ಸಿಹಿಯಾಗಿರುತ್ತವೆ.
ಇನ್ನು ಕಲ್ಲಂಗಡಿ ಹಣ್ಣಿನ ರುಚಿಯನ್ನು ಅದರ ಕಾಂಡದಿಂದ ನಿರ್ಣಯಿಸಬಹುದು. ಹಣ್ಣು ಮತ್ತು ಬಳ್ಳಿ ಸಂಧಿಸುವ ಕಾಂಡವು ಚಿಕ್ಕದಾಗಿದ್ದರೆ ಮತ್ತು ಟೊಳ್ಳಾಗಿದ್ದರೆ, ಅದು ಸಿಹಿ ರುಚಿಯನ್ನು ಹೊಂದಿರುತ್ತದೆ. ಅಂದಹಾಗೆ ನೀವು ಕಲ್ಲಂಗಡಿ ಹಣ್ಣನ್ನು ತಟ್ಟಿದಾಗ, ಅದು ಬಿರುಕು ಬಿಡುವ ಶಬ್ದ ಮಾಡುತ್ತದೆ. ಈ ವೇಳೆ ಅದರಲ್ಲಿ ಯಾವುದಾದರೂ ರಂಧ್ರಗಳಿವೆಯೇ ಎಂಬುದನ್ನು ನೀವು ಪರಿಶೀಲಿಸಬೇಕು. ಇನ್ನು ದೊಡ್ಡ ಹಣ್ಣನ್ನು ಎತ್ತುವಾಗ ಅದು ಹಗುರವಾಗಿದ್ದರೆ, ಅದರಲ್ಲಿ ನೀರಿನ ಅಂಶ ಮತ್ತು ರುಚಿ ಕಡಿಮೆ ಇರುತ್ತದೆ ಎಂದರ್ಥ. ಒಂದು ವೇಳೆ ಚಿಕ್ಕ ಹಣ್ಣಾಗಿದ್ದರೂ ಸಾಕಷ್ಟು ಭಾರವಾಗಿದ್ದರೆ, ಅದು ಉತ್ತಮ ನೀರಿನ ಅಂಶ ಮತ್ತು ರುಚಿಯನ್ನು ಹೊಂದಿರುತ್ತದೆ ಎಂದರ್ಥ.
ಕಲ್ಲಂಗಡಿಯ ಕೆಳಭಾಗದಲ್ಲಿ ಹಳದಿ ಕಲೆಗಳಿದ್ದರೆ, ಅದು ಹೊಲದಲ್ಲಿ ಮಾಗಿದ ಹಣ್ಣು ಎಂದರ್ಥ. ಬಿಳಿ ಅಥವಾ ಹಸಿರು ಕಲೆಗಳಿದ್ದರೆ, ಅದು ಸಾಕಷ್ಟು ಮಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಕೆಲವು ಸ್ಥಳಗಳಲ್ಲಿ ಹಳದಿ ಕಲೆಗಳ ನಡುವೆ ಬಿಳಿ ಕಲೆಗಳು ಗೋಚರಿಸಿದರೆ, ಅವುಗಳನ್ನು ಚುಚ್ಚುಮದ್ದು ಮಾಡಿ ಹಣ್ಣಾಗಿಸಲಾಗುತ್ತಿದೆ ಎಂದರ್ಥ. ಅದೇ ರೀತಿ, ಕಲ್ಲಂಗಡಿ ಖರೀದಿಸುವ ಮೊದಲು ಅದರಲ್ಲಿ ಯಾವುದೇ ರಂಧ್ರಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ರಂಧ್ರಗಳು ಕೂಡ ಚುಚ್ಚುಮದ್ದಿನ ಸಂಕೇತ ಆಗಿರಬಹುದು. (ಏಜೆನ್ಸೀಸ್)
ಆತ ಆಡೋದು ಗ್ಯಾರಂಟಿ… CSK ವಿರುದ್ಧದ ಪಂದ್ಯಕ್ಕೂ ಮುನ್ನವೇ RCB ಅಭಿಮಾನಿಗಳಿಗೆ ಗುಡ್ ನ್ಯೂಸ್! RCB
ಈ ಮೂರು ರಾಶಿಯ ಮಹಿಳೆಯರ ಕೋಪ ತುಂಬಾ ಅಪಾಯಕಾರಿಯಂತೆ… ಅವರೊಂದಿಗೆ ಎಚ್ಚರಿಕೆಯಿಂದಿರಿ! Zodiac Signs