ನ್ಯೂಸ್

ಸಮಂತಾ ಅಕ್ಕಿನೇನಿ ತೊಟ್ಟ ಈ ಸೀರೆ ಬೆಲೆ ಎಷ್ಟು ಗೊತ್ತೆ?

ಸೆಲೆಬ್ರಿಟಿಗಳು ತಾವು ತೊಡುವ ಬಟ್ಟೆಯಿಂದ ಹಿಡಿದು ಚಪ್ಪಲಿವರೆಗೂ ಎಲ್ಲವೂ ಬ್ರಾಂಡೆಡ್. ದುಬಾರಿ ಬೆಲೆಯ ಉಡುಪುಗಳನ್ನೇ ತೊಟ್ಟು ಒಮ್ಮೊಮ್ಮೆ ಟ್ರೋಲ್​ ಆದರೆ, ಕೆಲವೊಮ್ಮೆ ಅಷ್ಟೇ ಮೆಚ್ಚುಗೆಯನ್ನೂ ಪಡೆದುಕೊಂಡಿರುತ್ತಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ನಟಿ ಸಮಂತಾ ಕಾಸ್ಟ್ಲಿಸೀರೆ ತೊಟ್ಟು ಸುದ್ದಿಯಲ್ಲಿದ್ದರು.

ರಾಣಾ ದಗ್ಗುಬಾಟಿ ಮದುವೆ ಕಾರ್ಯಕ್ರಮದಲ್ಲಿ ಕಡು ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಅದರ ಕೆಲವು ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ರೀತಿ ಆವತ್ತು ಸಮಂತಾ ಶೇರ್​ ಮಾಡಿಕೊಂಡ ಆ ಸೀರೆಯ ಫೋಟೋ ದುಬಾರಿ ಬೆಲೆಯ ವಿಚಾರಕ್ಕೆ ಸದ್ದು ಮಾಡಿತ್ತು.

ಅಂದರೆ, ಬರೋಬ್ಬರಿ 75 ಸಾವಿರ ಮೌಲ್ಯದ ಸೀರೆಯನ್ನು ತೊಟ್ಟು ಇನ್ನುಳಿದವರಿಗಿಂತ ಹೆಚ್ಚೇ ಕಂಗೊಳಿಸಿದ್ದರು. ಈ ಸೀರೆಯ ಬೆಲೆ ಎಷ್ಟೆಂಬುದು ಸೋಷಿಯಲ್​ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ, ಇದೇ ಮೊತ್ತದಿಂದ ಒಂದೊಳ್ಳೆ ಗೇಮಿಂಗ್ ಲ್ಯಾಪ್​ಟಾಪ್​ ಖರೀದಿಸಬಹುದಂತೆ ಎಂಬ ಕಾಮೆಂಟ್​ಗಳೂ ಹರಿದಾಡಿದ್ದವು. (ಏಜೆನ್ಸೀಸ್​)