ನ್ಯೂಸ್

ನಡುರಸ್ತೆಯಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ ಕಾರ್ಯಕರ್ತರು!

rashmirhebbur

ಬೆಳಗಾವಿ: ಹಿಂದು ಪರ ಸಂಘಟನೆಯೊಂದು ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಹಾಡುಹಗಲೇ ತಲ್ವಾರ್​(ಖಡ್ಗ) ಹಿಡಿದು ಸಂಭ್ರಮಿಸಿದ ಪ್ರಸಂಗ ನಡೆದಿದೆ. ಬೆಳಗಾವಿಯ ಪೀರನವಾಡಿ ಕ್ರಾಸ್​​ನ ಬ್ರಹ್ಮನಗರದ ಹನುಮಾನ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಮಾರಕಾಸ್ತ್ರಗಳೊಂದಿಗೆ ನೃತ್ಯ ಮಾಡುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದುದು ವಿಪರ್ಯಾಸ.

ಆಯುಧ ಪೂಜೆಯ ಅಂಗವಾಗಿ ಬಜರಂಗ ದಳ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತಲ್ವಾರ್​ ಸಮೇತವಾಗಿ ಆಗಮಿಸಿದ ಕಾರ್ಯಕರ್ತರು, ನಡು ಬೀದಿಯಲ್ಲಿ ತಲ್ವಾರ್​ ಹಿಡಿದು ಡ್ಯಾನ್ಸ್ ಮಾಡಿದರು. ಕೆಲವು ಕಾರ್ಯಕರ್ತರು ಇನ್ನೊಬ್ಬರ ಮೇಲೆ ಹತ್ತಿ ಕುಳಿತು ತಲ್ವಾರ್​ ಬೀಸುತ್ತಿದ್ದ ದೃಶ್ಯಗಳೂ ಕಂಡುಬಂದವು. ಮಾರಕಾಸ್ತ್ರ ಹಿಡಿದು ಸಂಭ್ರಮಿಸಿದರೂ ಬೆಳಗಾವಿ ಪೋಲಿಸರು ಕೈಕಟ್ಟಿ ಕುಳಿತರೆ, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.