ಮೈಸೂರು ದಸರಾ: ವಿದ್ಯುತ್ ದೀಪಾಲಂಕಾರ ನೋಡಲು ಇನ್ನೂ 9 ದಿನ ಅವಕಾಶ

mysore
Published on

ಮೈಸೂರು: ಇಂದು ನಾಡಹಬ್ಬ ಮೈಸೂರು ದಸರಾ - 2021ರ ಪ್ರಯುಕ್ತ ನಂದಿಧ್ವಜ ಪೂಜೆ ಹಾಗೂ ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟಿಸಲು ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಸಮಸ್ತ ಜನರಿಗೆ ದಸರಾ ಶುಭಾಶಯ ಕೋರಿದ್ದಾರೆ.

ಇಂದು ರಾತ್ರಿ ದಸರಾ ವಿದ್ಯುತ್ ದೀಪಾಲಂಕಾರವನ್ನು ಕುಟುಂಬಸಮೇತರಾಗಿ ವೀಕ್ಷಿಸಲಿರುವ ಸಿಎಂ ಬೊಮ್ಮಾಯಿ, ಈ ಬಾರಿಯ ಅಲಂಕಾರ ತುಂಬಾ ಚೆನ್ನಾಗಿದೆ. ಬೇರೆ ಬೇರೆ ಜಿಲ್ಲೆಗಳು, ಊರುಗಳಿಂದ ಜನರು ನೋಡಲು ಬರುತ್ತಿದ್ದಾರೆ ಎಂದರು. ಜಿಲ್ಲೆಯ ಜನರು, ಜನಪ್ರತಿನಿಧಿಗಳು ಹಾಗೂ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ದಸರಾ ವಿದ್ಯುತ್​ ದೀಪಾಲಂಕಾರವನ್ನು ಇನ್ನೂ 9 ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net