ನ್ಯೂಸ್

ವಧುವಿನ ಜತೆ ಡ್ಯಾನ್ಸ್ ಮಾಡು ಎಂದಿದ್ದಕ್ಕೆ ವರ ಏನ್ಮಾಡಿದ ನೀವೇ ನೋಡಿ; Video Viral

ನವದೆಹಲಿ: ನಾವು ನೋಡಿರುವಂತೆ ಮದುವೆ ಮನೆಗಳಲ್ಲಿ (Marriage) ಸಾಮಾನ್ಯವಾಗಿ ತರ್ಲೆ ತಮಾಷೆಗಳು, ಎಡವಟ್ಟುಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಆಗುವ ಸಣ್ಣ ತಪ್ಪುಗಳು ದೊಡ್ಡ ಜಗಳಕ್ಕೆ ಕಾರಣವಾಗುತ್ತದೆ. ಆದರೆ, ಮದುವೆ ಸಮಾರಂಭಗಳಲ್ಲಿ ಸಂಭ್ರಮ ಮಾತ್ರ ಮನೆ ಮಾಡಿರುತ್ತೆ. ಡ್ಯಾನ್ಸ್​, ಕೀಟಲೆ ಸೇರಿದಂತೆ ಅನೇಕ ದೃಶ್ಯಗಳು ನೋಡಲು ಸಿಗುತ್ತವೆ. ಕೆಲವೊಂದು ದೃಶ್ಯಗಳು ಅತಿರೇಕವೆನಿಸಿದರು ನೋಡುಗರಿಗೆ ಮಜಾ ಕೊಡುವಲ್ಲಿ ಮಾತ್ರ ಫೇಲ್​ ಆಗುವುದಿಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸಖತ್​ ವೈರಲ್ (Video Viral)​ ಆಗುತ್ತಿದೆ.

ಮದುವೆ ಸಮಾರಂಭ ಒಂದರಲ್ಲಿ ವಧುವಿನ (Bride) ಕಡೆಯವರು ವರನಿಗೆ (Bride) ಡ್ಯಾನ್ಸ್​ (Dance) ಮಾಡುವಂತೆ ಒತ್ತಾಯಿಸುತ್ತಾರೆ. ಇದರಿಂದ ಕೋಪಗೊಂಡ ಮದುಮಗ (Groom) ಸ್ಟೇಜ್‌ ಮೇಲೆ ಡಾನ್ಸ್‌ ಮಾಡುತ್ತಲೇ ವಧುವಿನ ಕೈ ಹಿಡಿದು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾನೆ. ಅಲ್ಲದೇ ವೇದಿಕೆ ಮೇಲಿದ್ದವರ ಜೊತೆ ಜಗಳವನ್ನು ಆಡಿದ್ದಾನೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ (Video Viral) ಆಗಿದೆ.

ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ, ಯುವತಿಯೊಬ್ಬಳು ಮದುಮಗನನ್ನು ಭಾವಿಪತ್ನಿಯೊಂದಿಗೆ ಡ್ಯಾನ್ಸ್​ ಮಾಡುವಂತೆ ಮುಂದಕ್ಕೆ ಎಳೆಯುತ್ತಾಳೆ. ಆರಂಭದಲ್ಲಿ ವರ ತನಗೆ ಡ್ಯಾನ್ಸ್​ ಬರುವುದಿಲ್ಲ ಎಂದು ಹೇಳುತ್ತಾನೆ. ಇದನ್ನು ನೋಡಿದ ವಧು ವರನ ಕೈ ಹಿಡಿದು ಎಳೆದುಕೊಂಡು ಡ್ಯಾನ್ಸ್​ ಮಾಡುತ್ತಾಳೆ. ಆರಂಭದಲ್ಲಿ ಖುಷಿಯಿಂದಲೇ ಹೆಜ್ಜೆ ಹಾಕುವ ವರ ಆ ಬಳಿಕ ಏಕಾಏಕಿ ಸಿಟ್ಟಿಗೆದ್ದು, ಮದುಮಗಳ ಕೈ ಹಿಡಿದು ಎಳೆದಾಡಿ ಆಕೆಯನ್ನು ಕೆಳಗೆ ಬೀಳಿಸಿ ದೊಡ್ಡ ರಂಪಾಟವನ್ನೇ ಮಾಡಿದ್ದಾನೆ. ಬಳಿಕ ಅಲ್ಲಿದ್ದವರ ಜೊತೆ ಜಗಳವನ್ನು ಆಡುತ್ತಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ (Video Viral)​ ಆಗಿದೆ.

ಅಕ್ಟೋಬರ್​ 08ರಂದು ಹಂಚಿಕೊಳ್ಳಲಾದ ಈ ವಿಡಿಯೋ (Viral Video) ಈವರೆಗೂ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ಪರ-ವಿರೋಧದ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಕೆಲವರು ಇದು ಸ್ಕ್ರಿಪ್ಟೆಡ್‌ ಎಂದು ದೂರಿದರೆ ಮತ್ತಷ್ಟು ಜನ ಹುಡುಗನಿಗೆ ಶಾರ್ಟ್​ ಟೆಂಪರ್​ ಇರಬೇಕು ಎಂದು ಕಮೆಂಟ್​ ಹಾಕಿದ್ದಾರೆ.