ನ್ಯೂಸ್

ಮೊಮ್ಮಗನಿಂದಲೇ ಅಜ್ಜಿ ಕೊಲೆ! ಗೋಬರ್​ ಗ್ಯಾಸ್​ ಗುಂಡಿಯಲ್ಲಿ ಬಿದ್ದಿತ್ತು ಹೆಣ...

ತಿಪಟೂರು: ಜಗತ್ತಿನಲ್ಲಿ ಎಂತೆಂಥ ಕಟುಕರು ಇರ್ತಾರೆ ನೋಡಿ. ಕೈ ತುತ್ತು ಕೊಟ್ಟು ಪ್ರೀತಿಯಿಂದ ಸಾಕಿ ಸಲುಹಿದ ಮೊಮ್ಮಗನೇ ಅಜ್ಜಿಯ ತಲೆಯನ್ನ ಕಲ್ಲಿನಿಂದ ಜಜ್ಜಿ ಕೊಂದಿರುವವ ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.

ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿಯ ಕಿಬ್ಬನಹಳ್ಳಿ ಪಾಳ್ಯದಲ್ಲಿ ಶುಕ್ರವಾರ ತಡರಾತ್ರಿ ಮನೆಯಲ್ಲೇ ವೃದ್ಧೆ ಲಲಿತಮ್ಮ(75) ಕೊಲೆಯಾಗಿದ್ದಾರೆ. ಈಕೆಯ ಮೊಮ್ಮಗ ಪುನೀತ್ ಕುಮಾರ್(25) ಕೊಲೆ ಆರೋಪಿ. ಅಜ್ಜಿಯನ್ನ ಕೊಂದು ಗೋಬರ್ ಗ್ಯಾಸ್ ಗುಂಡಿಯಲ್ಲಿ ಹಾಕಿರುವುದು ಬೆಳಕಿಗೆ‌ ಬಂದಿದೆ. ಇದನ್ನೂ ಓದಿರಿ ರಸ್ತೆಯಲ್ಲಿ ಫೋಟೋ ಇಟ್ಟು ಬಿಕ್ಕಿಬಿಕ್ಕಿ ಅತ್ತರು, ರಕ್ತ ಹರಿದ ಸ್ಥಳದಲ್ಲೇ ಕಣ್ಣೀರ ಧಾರೆ… ಮನಕಲಕುತ್ತೆ ಈ ದೃಶ್ಯ

ಅಜ್ಜಿಯ ಹೆಸರಿನಲ್ಲಿ ಟ್ರ್ಯಾಕ್ಟರ್ ಖರೀದಿಸಿದ್ದ ಪುನೀತ್, ಸಾಲ ತೀರಿಸಲು ಪರದಾಡುತ್ತಿದ್ದ. ಕೊನೆಗೆ ಟ್ರ್ಯಾಕ್ಟರ್ ಮಾರಲು ತೀರ್ಮಾನಿಸಿದ ಪುನೀತ್​, ಸಹಿ ಮಾಡುವಂತೆ ಅಜ್ಜಿಗೆ ಪೀಡಿಸಿದ್ದ. ಇದಕ್ಕೆ ಒಪ್ಪದ ಅಜ್ಜಿ, ಸಹಿ ಮಾಡಲು ನಿರಾಕರಿಸಿದ್ದರು. ಇದೇ ವಿಚಾರವಾಗಿ ಸಿಟ್ಟಿಗೆದ್ದ ಮೊಮ್ಮಗ, ತಡರಾತ್ರಿ ಮನೆಯಲ್ಲೇ ಅಜ್ಜಿ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪುನೀತ್​ಗೆ ತಂದೆ-ತಾಯಿ ಇಲ್ಲ. ಹಾಗಾಗಿ ಅಜ್ಜಿ ಮನೆಯಲ್ಲೇ ಆತ ವಾಸವಿದ್ದ. ಕೆಬಿ ಕ್ರಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.