ನ್ಯೂಸ್

ಮಾತು ತಪ್ಪಿದ್ರೆ ಮನೆ ಹಾಳಾಗುತ್ತೆ... ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ ಕರ್ಪೂರ ಹಚ್ಚಿ ಜೆಡಿಎಸ್​-ಬಿಜೆಪಿ ಬೆಂಬಲಿತರ ಆಣೆ-ಪ್ರಮಾಣ!

ಚಾಮರಾಜನಗರ: ಹಳ್ಳಿ ರಾಜಕಾರಣಕ್ಕೂ ರೆಸಾರ್ಟ್​ ಪಾಲಿಟಿಕ್ಸ್​ ಕಾಲಿಟ್ಟಿದೆ. ಇದೀಗ ಗ್ರಾಮ ಪಂಚಾಯಿತಿ ಅಧಿಕಾರ ಹಂಚಿಕೆಗೂ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ನಡೆದಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯರ ನಡುವೆ ಒಪ್ಪಂದ ಆಗಿದೆ. ನುಡಿದಂತೆ ನಡೆಯುತ್ತೇವೆ. ನುಡಿದಂತೆ ನಡೆಯದಿದ್ದರೆ ಮನೆ ಹಾಳಾಗುತ್ತೆ ಎಂದು ಧರ್ಮಸ್ಥಳದಲ್ಲಿ ಕರ್ಪೂರ ಹಚ್ಚಿ ಆಣೆ-ಪ್ರಮಾಣ ಮಾಡಿರುವ ದೃಶ್ಯ ವೈರಲ್​ ಆಗಿದೆ. ಇದನ್ನೂ ಓದಿರಿ ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕುಮಾರಸ್ವಾಮಿ!

ಗ್ರಾಪಂ ಅಧ್ಯಕ್ಷ ಸ್ಥಾನ ಮೊದಲ ಅವಧಿ 10 ತಿಂಗಳು ಜೆಡಿಎಸ್ ಬೆಂಬಲಿತರಿಗೆ, ಎರಡನೇ ಅವಧಿ ಬಿಜೆಪಿ ಬೆಂಬಲಿತರಿಗೆ ನೀಡಲು ಒಪ್ಪಂದ ಆಗಿದೆ. ಅದರಂತೆ ಉಪಾಧ್ಯಕ್ಷ ಸ್ಥಾನ ಮೊದಲ 10 ತಿಂಗಳು ಬಿಜೆಪಿ ಬೆಂಬಲಿತರಿಗೆ, ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತರಿಗೆಂದು ಒಪ್ಪಂದ ಆಗಿದೆ. ಒಟ್ಟು 15 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ 5, ಜೆಡಿಎಸ್ ಬೆಂಬಲಿತ 5, ಕಾಂಗ್ರೆಸ್ ಬೆಂಬಲಿತ 5 ಸದಸ್ಯರಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ 20:20 ಸರ್ಕಾರದ ಅವಧಿಯಲ್ಲಿ ಉಂಟಾಗಿದ್ದ ಘಟನೆ ಮರುಕಳಿಸಬಾರದೆಂದು ಇಲ್ಲಿನ ಗ್ರಾಪಂ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದಾರೆ.