ನ್ಯೂಸ್

ಸಾರಿಗೆ ಬಸ್​- ಬೈಕ್​ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಬ್ಯಾಂಕ್​ ಮ್ಯಾನೇಜರ್​ ಮತ್ತು ಕ್ಯಾಶಿಯರ್​ ಸಾವು

ವಿಜಯಪುರ: ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಬಳಿ ಇಂದು ಬೆಳಗ್ಗೆ ಸಾರಿಗೆ ಬಸ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ.

ಖೇಡಗಿ ಗ್ರಾಮದ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಡಿ.ಎಸ್.ಬಿರಾದಾರ, ಕ್ಯಾಶಿಯರ್ ಚೈತನ್ಯ ಕುಮಾರ ಮೃತ ದುರ್ದೈವಿಗಳು. ಬ್ಯಾಂಕ್​ ಕೆಲಸ ನಿಮಿತ್ತ ಇವರಿಬ್ಬರೂ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಸಾರಿಗೆ ಬಸ್​ ಮತ್ತು ಬೈಕ್​ ನಡುವೆ ಅಪಾಘತ ಸಂಭವಿಸಿದೆ. ಇದನ್ನೂ ಓದಿರಿ ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

ತೀವ್ರಗಾಯಗೊಂಡ ಬಿರಾದಾರ ಮತ್ತು ಚೈತನ್ಯ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು. ಸ್ಥಳಕ್ಕೆ ಬಂದ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದರು. ಬಸ್ ಚಾಲಕ ಹಾಗೂ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.