ನ್ಯೂಸ್

ತಿಂಗಳ ಮುಂಚೆಯೇ ಸಿಗಲಿದೆ ವೈರಾಣು ಸ್ಫೋಟ ಮಾಹಿತಿ: ಸಾಂಕ್ರಾಮಿಕ ಸನ್ನದ್ಧತೆ ಕೇಂದ್ರ ಸ್ಥಾಪನೆಗೆ ಸರ್ಕಾರ ಅನುಮತಿ

| ಪಂಕಜ ಕೆ.ಎಂ. ಬೆಂಗಳೂರು

ಸಾಂಕ್ರಾಮಿಕ ರೋಗ ಹರಡುವ ವೈರಾಣು ಸ್ಪೋಟಗೊಳ್ಳುವ ಒಂದು ತಿಂಗಳ ಮುನ್ನವೇ ಮಾಹಿತಿ ಕೊಡುವಂತ ವ್ಯವಸ್ಥೆ ಕರ್ನಾಟದಲ್ಲಿ ಬರಲಿದೆ. ಸಾಂಕ್ರಾಮಿಕ ರೋಗಗಳ ಹರಡುವಿಕೆ (ಜ್ಟಿಚ್ಝ ಈಜಿಠಛಿಚಠಛಿ ಣ್ಠಠಿಚ್ಟಿಛಿಚk) ತಡೆಯಲು ಸಾಂಕ್ರಾಮಿಕ ಸನ್ನದ್ಧತಾ ಕೇಂದ್ರ ಸ್ಥಾಪನೆಗೆ (ಇಛ್ಞಿಠ್ಟಿಛಿ ್ಛ್ಟ ಉಟಜಿಛಛಿಞಜ್ಚಿ ಕ್ಟಛಿಟಚ್ಟಛಿಛ್ಞಛಿಠಠ) ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಇದಕ್ಕೆ ತಗಲುವ ವೆಚ್ಚಕ್ಕಾಗಿ ಈಗಾಗಲೆ 10 ಕೋಟಿ ರೂ. ಅನುದಾವನ್ನು ಮೀಸಲಿರಿಸಲಾಗಿದೆ.

ಕೋವಿಡ್ ನಂತರದಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದ್ದರೂ ಸಾಂಕ್ರಾಮಿಕ ರೋಗಗಳ ಬಗೆಗಿನ ಆತಂಕ ದೂರಾಗಿಲ್ಲ. ಕಳೆದ 2 ತಿಂಗಳಿಂದ ಡೆಂಘ ಪ್ರಕರಣಗಳ ಏರಿಕೆ ಇನ್ನಷ್ಟು ಭೀತಿ ಸೃಷ್ಟಿಸಿದ್ದು, ರಾಜ್ಯ ಸರ್ಕಾರ ಸಾಮಾಜಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಬೆಂಗಳೂರು ಇನೋವೇಷನ್ ಸೆಂಟರ್ (ಬಿಐಸಿ) ಮತ್ತು ಇನ್​ಫೆಕ್ಷಿಯಸ್ ಡಿಸೀಸ್ ರಿಸರ್ಚ್ ಫೌಂಡೇಷನ್ (ಐಡಿಆರ್​ಎಫ್) ಸಹಭಾಗಿತ್ವದಲ್ಲಿ ಸಾಂಕ್ರಾಮಿಕ ಸನ್ನದ್ಧತಾ ಕೇಂದ್ರ ಸ್ಥಾಪನೆ ಮಾಡುತ್ತಿದೆ.

ಸಾಂಕ್ರಾಮಿಕ ಸನ್ನದ್ಧತಾ ಕೇಂದ್ರ ಸ್ಥಾಪನೆಗಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಈಗಾಗಲೆ ಮೂರು ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಗುರುತಿಸಲಾಗಿದೆ. ಅನುದಾನ ಬಿಡುಗಡೆಯಾದ ಆರು ತಿಂಗಳಲ್ಲಿ ಪ್ರಯೋಗಾಲಯ ಆರಂಭವಾಗಲಿದೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ನಿಯಂತ್ರಿಸಲು ಇದು ಸಹಕಾರಿಯಾಗಲಿದೆ ಎಂದು ಐಟಿಬಿಟಿ ಇಲಾಖೆ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಸಾಂಕ್ರಾಮಿಕ ರೋಗಗಳು ಏಕಾಏಕಿ ಏರಿಕೆ ಕಾಣುವುದನ್ನು ನಿಯಂತ್ರಿಸಲು ಈ ಪ್ರಯೋಗಾಲಯ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಕಣ್ಗಾವಲು ಪರಿಹಾರ ನಿರ್ವಿುಸಲು ಐಡಿಆರ್​ಎಫ್ ಅಕಾಡೆಮಿಗಳು, ಸರ್ಕಾರಿ ಪ್ರಯೋಗಾಲಯಗಳು ಹಾಗೂ ಖಾಸಗಿ ಸಂಶೋಧನಾ ಸಂಸ್ಥೆಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ. | ರೋಹನ್ ಪೈಸ್, ಸಿಇಒ, ಐಡಿಆರ್​ಎಫ್

ರೋಗಗಳ ಸ್ಫೋಟ ನಿಯಂತ್ರಣ?: ಈ ಪ್ರಯೋಗಾಲಯವು (ಬಿಎಸ್​ಎಲ್ ಲ್ಯಾಬ್) ಅತ್ಯಾಧುನಿಕ ಹಾಗೂ ಮುಂದುವರಿದ ವೈದ್ಯಕೀಯ ಉಪಕರಣಗಳನ್ನು ಹೊಂದಿರುತ್ತದೆ. ಕೋವಿಡ್, ಡೆಂಘ, ಚಿಕೂನ್ ಗುನ್ಯಾ, ಮಲೇರಿಯಾ, ಟೈಫಾಯಿಡ್ ಸೇರಿ ಎಲ್ಲ ರೀತಿಯ ಸಾಂಕ್ರಾಮಿಕ ರೋಗಗಳು ಏಕಾಏಕಿ ಏರಿಕೆ ಆಗುವ ಸಾಧ್ಯತೆಯನ್ನು ಪತ್ತೆ ಮಾಡಲಿದೆ. ಮುಂಚಿತವಾಗಿಯೇ ರೋಗದ ಹರಡುವಿಕೆ ತಿಳಿದು, ಪ್ರಕರಣಗಳು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮಾಹಿತಿ ನೀಡಲಾಗುವುದು.

ಲ್ಯಾಬ್ ಕಾರ್ಯವಿಧಾನ ಹೇಗೆ?: ಕಣ್ಗಾವಲುಗಾಗಿ ಪ್ರತಿ ಜಿಲ್ಲೆಗೆ 3 ರಿಂದ 5 ಸೈಟ್​ಗಳೊಂದಿಗೆ 31 ಜಿಲ್ಲೆಗಳಿಂದ ತ್ಯಾಜ್ಯ ನೀರಿನ ಮಾದರಿಗಳನ್ನು ತಿಂಗಳಿಗೆ 2 ರಿಂದ 4 ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಆ ಮಾದರಿಗಳನ್ನು ಮೆಟಾ ಜೀನೋಮಿಕ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದು ಎಲ್ಲ ಚಾಲ್ತಿಯಲ್ಲಿರುವ ರೋಗಕಾರಕಗಳ ದತ್ತಾಂಶ (ಡೇಟಾ)ವನ್ನು ಒದಗಿಸುತ್ತದೆ. ಇದಲ್ಲದೆ, ವರದಿಯಾದ ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಆಧಾರದ ಮೇಲೆ ನಿರ್ದಿಷ್ಟ ವೈರಾಣುವಿನ ಪ್ರಭಾವ, ರೂಪಾಂತರ, ಹರಡುವಿಕೆಯ ಪ್ರಮಾಣ ಮತ್ತು ಪರಿಣಾಮಗಳನ್ನು ವಿವರವಾಗಿ ಅಧ್ಯಯನ ಮಾಡಲಾಗುತ್ತದೆ. ನಿಯಂತ್ರಣ ಮತ್ತು ರೋಗ ಹರಡುವಿಕೆ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳಿಗೆ ಪ್ರಸಾರ ಮಾಡಲು ಆರೋಗ್ಯ ಇಲಾಖೆಗೆ ಮಾಹಿತಿ ಒದಗಿಸಲಾಗುತ್ತದೆ.

ಸೈಟ್​ಗಳ ಆಯ್ಕೆ ಹೇಗೆ?: ಮಾದರಿಗಳನ್ನು ಸಂಗ್ರಹಿಸಲು ಸೈಟ್​ಗಳ (ಪ್ರದೇಶವಾರು) ಆಯ್ಕೆಯು ಜನಸಂಖ್ಯೆಯ ಸಾಂದ್ರತೆ ಮತ್ತು ಆ ಪ್ರದೇಶದಲ್ಲಿ ನಿರ್ದಿಷ್ಟ ವೈರಾಣು ಪ್ರಭಾವ ಆಧರಿಸಿರುತ್ತದೆ. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಈ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈಟ್​ಗಳನ್ನು ಹೊಂದಿರುತ್ತವೆ. ಉದಾಹರಣೆಗೆ: ಬೆಂಗಳೂರಿನಲ್ಲಿ ಜನಸಂಖ್ಯೆ ಹಾಗೂ ರೋಗದ ಹರಡುವಿಕೆ ಪ್ರಮಾಣ ಆಧರಿಸಿ 40 ಸೈಟ್​ಗಳನ್ನು ನಿಗದಿಪಡಿಸಬಹುದಾಗಿದೆ.