ನ್ಯೂಸ್

ಹಳಿತಪ್ಪಿ ಸೇತುವೆಯಿಂದ ನದಿಗೆ ಉರುಳಿದ ಗೂಡ್ಸ್​ ರೈಲು: ಟನ್​ಗಟ್ಟಲೇ ಕಲ್ಲಿದ್ದಲು ನಾಶ

ಭೋಪಾಲ್​: 16 ಕೋಚುಗಳ ಗೂಡ್ಸ್​ ರೈಲೊಂದು ಮಧ್ಯಪ್ರದೇಶದ ಅನುಪ್ಪುರ್​ ಬಳಿ ಹಳಿತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ್ದ ಟ್ರೈನ್​ ಛತ್ತೀಸ್​ಗಢದ ಕೊರ್ಬಾದಿಂದ ಬರುತ್ತಿತ್ತು.

ಪ್ರಾಥಮಿಕ ವರದಿಯ ಪ್ರಕಾರ ಅಲಾನ್​ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೇ ಮೇಲಿನ ಹಳಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದರಿಂದ ರೈಲು ಹಳಿತಪ್ಪಿದ ಅದರ ಅನೇಕ ಕೋಚ್​​ಗಳು ನದಿಗೆ ಉರುಳಿವೆ. ಈ ಬಗ್ಗೆ ಅಧಿಕಾರಿಗಳೂ ಕೂಡ ಮಾಹಿತಿ ನೀಡಿದ್ದಾರೆ.

ಈವರೆಗೂ ಯಾವುದೇ ಹಾನಿಯ ಕುರಿತು ವರದಿ ಆಗಿಲ್ಲ ಮತ್ತು ರಕ್ಷಣಾ ಕಾರ್ಯ ಸ್ಥಳದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕ ಕೋಚ್​ಗಳು ನದಿಗೆ ಉರುಳಿವೆ. ಇನ್ನು ಅನೇಕ ಕೋಚ್​ಗಳು ಅಂಟಿಕೊಂಂತೆ ಹಾಗೆಯೇ ನೇತಾಡುತ್ತಿವೆ. ಘಟನೆಯಿಂದ ಟನ್​ಗಟ್ಟಲೇ ಕಲ್ಲಿದ್ದಲು ನದಿಗೆ ಸುರಿದು ನಾಶವಾಗಿದೆ.

ಅಂದಹಾಗೆ ಗೂಡ್ಸ್​ ಟ್ರೈನ್​ ಮಧ್ಯಪ್ರದೇಶದ ಕಾಟ್ನಿ ಪ್ರದೇಶಕ್ಕೆ ತೆರಳುತ್ತಿತ್ತು. (ಏಜೆನ್ಸೀಸ್​)