ನ್ಯೂಸ್

ಪಿಎಸ್​​ಯು ಬ್ಯಾಂಕ್ ನೌಕರರಿಗೆ ಸಿಹಿಸುದ್ದಿ..

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಳೆಯ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಕೆಲಸ ಮಾಡುವ 9 ಲಕ್ಷ ಉದ್ಯೋಗಿಗಳಿಗೆ ಒಂದು ಸಿಹಿ ಸುದ್ದಿ.

ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ ಮತ್ತು ಯೂನಿಯನ್​​ಗಳು ಶೇ. 15 ಸಂಬಳ ಹೆಚ್ಚಿಸಲು ಮತ್ತು ಪಿಂಚಣಿ ಕೊಡುಗೆ ಶೇ. 4 ಹೆಚ್ಚಿಸಲು ಒಪ್ಪಿಕೊಂಡಿವೆ.

ಈ ಮೊದಲು ಈ ಉದ್ಯೋಗಿಗಳ 10% ಮೂಲ ವೇತನ ಮತ್ತು ಡಿಎದಿಂದಾಗಿ ಅವರ ನಿವೃತ್ತಿ ಹಣದ ಪ್ರಮಾಣ ಅಲ್ಪವಾಗುತ್ತಿತ್ತು. ಆದರೆ ವೇತನ ರಚನೆಯಲ್ಲಿ ಇತ್ತೀಚಿನ ಪರಿಷ್ಕರಣೆಯಿಂದ, ಅವರ 14% ಮೂಲ ವೇತನ ಮತ್ತು ಡಿಎ ಪಿಂಚಣಿ ಸೌಲಭ್ಯಕ್ಕೆ ಉತ್ತಮವಾಗಲಿದೆ.

ವೇತನ ಹೆಚ್ಚಳವು 2017 ರ ನವೆಂಬರ್ ರಿಂದ ಅನ್ವಯವಾಗುತ್ತದೆ. ಈ ವೇತನ ಪರಿಷ್ಕರಣೆ 8.5 ಲಕ್ಷ ಸಾರ್ವಜನಿಕ ವಲಯದ ಬ್ಯಾಂಕ್ ಸಿಬ್ಬಂದಿ ಮತ್ತು 50,000 ಹಳೆಯ ಖಾಸಗಿ ವಲಯದ ಬ್ಯಾಂಕ್ ಉದ್ಯೋಗಿಗಳನ್ನು ಒಳಗೊಂಡಿದೆ.