Gold Rates: ಮಾರ್ಚ್-ಏಪ್ರಿಲ್ ಶುರುವಾಗುತ್ತಿದ್ದಂತೆ ಎಲ್ಲೆಲ್ಲೂ ಮದುವೆ ಮತ್ತು ಶುಭ ಸಮಾರಂಭಗಳಿಗೂ ಶುಭ ಘಳಿಗೆ. ವಿವಾಹ ಕಾರ್ಯಕ್ರಮಗಳು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಚಿನ್ನ. ಕಾರಣ, ಚಿನ್ನವಿಲ್ಲದ ಸಮಾರಂಭ ಅರ್ಥಪೂರ್ಣ ಎಂಬ ನಂಬಿಕೆ ನಮ್ಮಲ್ಲಿ ಹೆಚ್ಚು ಹಾಗೂ ಒಂದು ವಿಭಿನ್ನ ಪ್ರವೃತ್ತಿ ಎಂದರೆ ತಪ್ಪಾಗಲಾರದು. ಇದರೊಂದಿಗೆ ಚಿನ್ನವನ್ನೇ ಹೂಡಿಕೆಯ ಅಸ್ತ್ರವನ್ನಾಗಿ ಬಳಿಸಿಕೊಳ್ಳುವ ಹಲವರಿಗೆ ಇದು ಉತ್ತಮ ಸಾಧನ. ಆದಾಗ್ಯೂ, ಚಿನ್ನದ ಬೆಲೆಗಳು ಆಕಾಶದತ್ತ ಮುಖಮಾಡಿದ್ದು, ಗ್ರಾಹಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.
ದಿನ ಕಳೆದಂತೆ ಚಿನ್ನದ ದರದಲ್ಲಿ ಇಳಿಕೆ ಕಾಣುತ್ತಿದೆ ಎಂದು ಸಂತಸದಲ್ಲಿದ್ದ ಗ್ರಾಹಕರಿಗೆ ಇದೀಗ ಆಘಾತ ಎದುರಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಚಿನ್ನದ ದರವು ದಿಢೀರ್ ಹಾಗೂ ಭಾರೀ ಹೆಚ್ಚಳ ಕಂಡಿದೆ. ಈ ಸಂದರ್ಭದಲ್ಲಿ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ಮತ್ತೇ ದಾಖಲೆಯನ್ನು ಬರೆದಿದೆ. ಇದೀಗ 10 ಗ್ರಾಂ ಗೋಲ್ಡ್ ದರ 1 ಲಕ್ಷ ರೂ. ದಾಟಿದೆ ಎಂಬ ವರದಿ ಸದ್ಯ ಚಿನ್ನದಂತ ಗ್ರಾಹಕರ ಹುಬ್ಬೇರಿಸಿದೆ.
ಶುಕ್ರವಾರ (ಜೂ.13) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 2,120 ರೂ. ಹೆಚ್ಚಾಗಿದೆ. 22 ಕ್ಯಾರೆಟ್‌ನ 1,950 ರೂ. ಏರಿಕೆಯಾಗಿದೆ. ಇದರೊಂದಿಗೆ, ಕಳೆದ ಮೂರು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 4 ಸಾವಿರ ರೂ. ಹೆಚ್ಚಳ ಕಂಡಿದೆ ಎಂಬುದು ಗಮನಾರ್ಹ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ದುಪ್ಪಟ್ಟಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ 48 ಡಾಲರ್ನಷ್ಟು ಹೆಚ್ಚಾಗಿದೆ. ಇಂದು ಬೆಳಗ್ಗೆ 3,427 ಡಾಲರ್ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯಲ್ಲಿ 1100 ರೂ. ಜಾಸ್ತಿಯಾಗಿದೆ.
ಇದನ್ನೂ ಓದಿ: ಗಂಡ, ಮೂವರು ಮಕ್ಕಳ ಜತೆ ಒಟ್ಟಿಗಿರಲು ವೈದ್ಯೆ ವೃತ್ತಿ ತೊರೆದು ಹೊರಟವಳು ಕುಟುಂಬ ಸಮೇತ ದುರ್ಮರಣ! Ahmedabad Plane Crash
ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣ ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧ. ಹಾಗೆಯೇ, ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಉದ್ವಿಗ್ನತೆ. ಅಂತಾರಾಷ್ಟ್ರೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಹೂಡಿಕೆದಾರರು ಸುರಕ್ಷಿತ ಚಿನ್ನದಲ್ಲಿ ಹೂಡಿಕೆ ಮಾಡಲು ಹೆಚ್ಚು ಒಲವು ತೋರುತ್ತಿದ್ದಾರೆ. ಇದರ ಪರಿಣಾಮವಾಗಿ, ಚಿನ್ನದ ದರಗಳು ತೀವ್ರವಾಗಿ ಏರಿಕೆ ಕಾಣುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಮತ್ತೊಂದೆಡೆ, ಯುಎಸ್ ಹಣದುಬ್ಬರ ದತ್ತಾಂಶವು ನಿರೀಕ್ಷೆಗಿಂತ ದುರ್ಬಲವಾಗಿರುವುದರಿಂದ, ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವುದಿಲ್ಲ ಎಂಬ ನಿರೀಕ್ಷೆಗಳು ಹೆಚ್ಚಿವೆ. ಇದು ಚಿನ್ನದ ದರಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇಸ್ರೇಲ್ ದಾಳಿ ಬೆನ್ನಲ್ಲೇ ವಾಯುಪ್ರದೇಶ ನಿರ್ಬಂಧಿಸಿದ ಇರಾನ್: 16 Air India ವಿಮಾನಗಳ ಮಾರ್ಗ ಬದಲಾವಣೆ! Air India flights
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ.