ನ್ಯೂಸ್

ಇಳಿಕೆಯತ್ತ ಚಿನ್ನ, ಏರಿಕೆಯತ್ತ ಬೆಳ್ಳಿ; ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates

Gold Rates: ಏಪ್ರಿಲ್​ನಿಂದ ಮದುವೆ ಸೀಸನ್​ ಆರಂಭಗೊಂಡಿದ್ದರೆ, ಇತ್ತ ಹಬ್ಬ ಹರಿದಿನಗಳು, ಶುಭ ಸಮಾರಂಭಗಳು ಶುರುವಾಗಿವೆ. ಹೀಗಿರುವಾಗಲೇ, ಚಿನ್ನದ ಬೆಲೆ 1 ಲಕ್ಷ ರೂ. ಗಡಿದಾಟಿ ಹೋಗಿರುವುದು ಸದ್ಯ ಗ್ರಾಹಕರನ್ನು ಭಾರೀ ಚಿಂತೆಗೆ ದೂಡಿದೆ. ಕಳೆದ ಕೆಲವು ವಾರಗಳಿಂದ ಕಡಿಮೆಯಾಗಿದ್ದ ಚಿನ್ನ, ಇದೀಗ ಮತ್ತೇ ದಿಢೀರ್​ ಏರಿಕೆ ಹಾದಿಯನ್ನು ಹಿಡಿದಿರುವುದು ಇದೀಗ ಗ್ರಾಹಕರನ್ನು ಬೇಸರಕ್ಕೆ ದೂಡಿದೆ.

ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ಚಿನ್ನ, ಕೊಳ್ಳಲು ಕಷ್ಟಕರವಾಗಿದೆ. ಆದರೆ, ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ಸಾಧನವಾಗಿದೆ. ಅಂತಾರಾಷ್ಟ್ರೀಯ ಉದ್ವಿಗ್ನತೆಯಿಂದಾಗಿ, ಗೋಲ್ಡ್​ ಬೆಲೆಗಳು ದಿಢೀರ್​ ಹೆಚ್ಚುತ್ತಿವೆ. ಆದಾಗ್ಯೂ, ಇಂದು ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದ್ದರೆ, ಬೆಳ್ಳಿಯ ಬೆಲೆ ಮಾತ್ರ ಹೆಚ್ಚಳ ಕಂಡಿದೆ.

ಸೋಮವಾರ (ಆ.25) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 110 ರೂ. ಇಳಿಕೆ ಕಂಡರೆ, 22 ಕ್ಯಾರೆಟ್ ಚಿನ್ನ 100 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ ತೀವ್ರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ 1,000 ರೂ. ಹೆಚ್ಚಾಗಿದೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸ್ವಲ್ಪ ಹೆಚ್ಚಿದೆ. ಒಂದು ಔನ್ಸ್ ಚಿನ್ನದ ಬೆಲೆ 10 ಡಾಲರ್ ಏರಿಕೆಯಾಗಿದೆ. ಇದರೊಂದಿಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ 3,365 ರಷ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,300 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,01,770 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,150 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,01,620 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 93,150 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,01,620 ರೂ. ಆಗಿದೆ.

ಬೆಳ್ಳಿ ಬೆಲೆ 1,000 ರೂ. ಏರಿಕೆ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,21,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,31,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,31,000 ರೂ. ಇದೆ,(ಏಜೆನ್ಸೀಸ್).

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.