ಸಾಂದರ್ಭಿಕ ಚಿತ್ರ 
ನ್ಯೂಸ್

Gold Price: ಚಿನ್ನ ಗಗನಮುಖಿ .. ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿದ ಬಂಗಾರ! ಬೆಂಗಳೂರಲ್ಲಿ ಬೆಲೆ ಎಷ್ಟು?

ಬೆಂಗಳೂರು: ಕೇಂದ್ರ ಸರ್ಕಾರ ಕಸ್ಟಮ್ಸ್​ ಸುಂಕ ಇಳಿಸಿದ ನಂತರ ಇಳಿಮುಖವಾಗಿದ್ದ ಬಂಗಾರದ ಬೆಲೆ(Gold Price) ಮತ್ತೆ ಗಗನಮುಖಿಯಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ, ಖರೀದಿಸಲು ಬಯಸುವವರಿಗೆ ಕೆಟ್ಟ ಸುದ್ದಿ ಹೊರಬಿದ್ದಿದೆ. ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಮಂಗಳವಾರ(ಸೆ.25)ಗರಿಷ್ಠ ಮಟ್ಟ ತಲುಪಿದೆ.

ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಗರಿಷ್ಟ 63,500 ಇದ್ದಿದ್ದು ಈಗ ಸೆಪ್ಟೆಂಬರ್​ ಅಂತ್ಯಕ್ಕೆ 70,600 ರೂ. ತಲುಪಿದೆ. ತಿಂಗಳ ಅವಧಿಯಲ್ಲಿ 7 ಸಾವಿರ ರೂ. ಏರಿಕೆಯಾಗಿದೆ.

ಪ್ರಸ್ತುತ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 2655 ಡಾಲರ್‌ ಇದೆ. ದೇಶೀಯವಾಗಿ ಕಳೆದ 6 ದಿನಗಳಿಂದ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ.

ಸಾರ್ವಕಾಲಿಕ ಗರಿಷ್ಟ ಬೆಲೆ:

ಈ ಹಿಂದೆ ಬೆಂಗಳೂರಿನಲ್ಲಿ ಗರಿಷ್ಟ ಬೆಲೆ ಮೇ 20ರಂದು(10ಗ್ರಾಂ) 22ಕ್ಯಾರೆಟ್ ಚಿನ್ನದ ಬೆಲೆ 69ಸಾವಿರ ಇದ್ದು, ಸೆ.25ರಂದು 70,600 ತಲುಪಿದೆ. ಅದೇ ದಿನ 24 ಕ್ಯಾರೆಟ್ ಶುದ್ಧ ಚಿನ್ನದ ದರ ರೂ. 75,100 ರೂ. ಇದ್ದಿದ್ದು, ಈಗ ರೂ. 77,020ರಲ್ಲಿ ವಹಿವಾಟಾಗುತ್ತಿದೆ.