

ಮುಂಬೈ: ಕಳ್ಳತನದ ಶಂಕೆ(Suspected of Theft)ಯ ಮೇಲೆ ಇಬ್ಬರು ಅಪ್ರಾಪ್ತ ಸಹೋದರರನ್ನು ಹಿಡಿದು ವಿವಸ್ತ್ರಗೊಳಿಸಿ, ನಂತರ ಹಲ್ಲೆ ನಡೆಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜುಹು ಪ್ರದೇಶದಲ್ಲಿ ವಾಸವಿದ್ದ ಅಪ್ರಾಪ್ತ ಬಾಲಕರ ತಾಯಿ ತೀರಿಕೊಂಡಿದ್ದು, ತಂದೆ ಇವರಿಬ್ಬರನ್ನು ತೊರೆದಿದ್ದಾರೆ. ಇವರ ಅಜ್ಜಿ, ಚಿಂದಿ ಆಯುವವರು ನೋಡಿಕೊಳ್ಳುತ್ತಿದ್ದರು. ಇವರಿಬ್ಬರನ್ನು ಕಳ್ಳತನದ ಆರೋಪದ ಮೇಲೆ ಸರಪಳಿಗಳಿಂದ ಕಟ್ಟಿ ಬೆತ್ತಲಾಗಿಸಿ ಮೆರವಣಿಗೆ ಮಾಡಲಾಗಿತ್ತು. ಬಳಿಕ ಅವರ ಕೂದಲನ್ನು ಕತ್ತರಿಸಿ ಥಳಿಸಲಾಗಿತ್ತು.
ಆರೋಪಿಗಳು ತಾವು ನೀಡಿದ ಚಿತ್ರಹಿಂಸೆಯನ್ನು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.
ವೀಡೀಯೋ ನೋಡೊದ ಬಳಿಕ ಪ್ರಮುಖ ಆರೋಪಿ 22 ವರ್ಷದ ಸೂರಜ್ ಪತ್ವಾನನ್ನು ಬಂಧಿಸಲಾಗಿದೆ. ಆತನ ಇಬ್ಬರು ಸಹಚರರಿಗಾಗಿ ಪೊಲೀಸರು ಇನ್ನೂ ಶೋಧ ನಡೆಸುತ್ತಿದ್ದಾರೆ. ಅಪ್ರಾಪ್ತ ಸಹೋದರರ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ.(Suspected of Theft)