ನ್ಯೂಸ್

ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಜಿಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಬಂಧನ; ಅಧ್ಯಾಪಕರಿಗೆ ಸಲಹೆ / SexuallyExploiting

Vijayavani Webdesk

SexuallyExploiting: ವಿದ್ಯಾರ್ಥಿಯೊಬ್ಬಳ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಆತನನ್ನು ಬಂಧಿಸಿದ ಒಂದು ದಿನದ ನಂತರ, ಒಡಿಶಾದ ಸಂಬಲ್ಪುರದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯವು ಶುಕ್ರವಾರ ತನ್ನ ಎಲ್ಲಾ ಬೋಧನಾ ಸಿಬ್ಬಂದಿಗಳಿಗಳಿಗೆ ಸಲಹೆ ನೀಡಿದೆ.

ಜಿಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ 20 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯದ ಎಸಗಿರುವ ಅರೋಪದ ಮೇರೆಗೆ ಆತನನ್ನು ಗುರುವಾರ ಜುಲೈ(17) ರಂದು ಬಂಧಿಸಲಾಗಿದೆ. ಬಂಧನದ ನಂತರ ಆತನನ್ನು ವಿಶ್ವವಿದ್ಯಾಲಯವು ಅಮಾನತುಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಲಹೆ ಏನಾಗಿತ್ತು?

ಜಿಎಂ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಸುಸಂತ್ ಕುಮಾರ್ ದಾಸ್ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳನ್ನು ಸಹೋದರ- ಸಹೋದರಿಯರಂತೆ ನೋಡಿಕೊಳ್ಳಬೇಕು. ಹಾಗೆ ಯಾವುದೇ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಮಾಹಿತಿ ಬಂದರೆ ಅವರನ್ನು ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.