ನ್ಯೂಸ್

"ಎಲ್ಲರನ್ನೂ ಕೋರ್ಟ್​ನಲ್ಲಿ ನಿಲ್ಲಿಸುತ್ತೇನೆ" ಎಂದು ಗುಡುಗಿದಳು ಓಡಿಹೋಗಿ ಮದುವೆಯಾದ ಯುವತಿ!

ನವದೆಹಲಿ: ಪ್ರೇಮಿಗಳು ಓಡಿಹೋಗಿ ಮದುವೆಯಾಗುವುದು ಹೊಸ ವಿಷಯವೇನಲ್ಲ. ಬಿಹಾರದ ಖುಶಿ ಕುಮಾರಿ ಎಂಬ 19 ವರ್ಷದ ಯುವತಿಯ ಪ್ರಕರಣ ಇತ್ತೀಚೆಗೆ ಸುದ್ದಿ ಮಾಡುತ್ತಿದೆ. ಆದರೆ ದೇಶದಲ್ಲಿ ಮದುವೆಯಾಗಲು ಹೆಣ್ಣುಮಕ್ಕಳ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಏರಿಸಲಾಗಿದೆ ಎನ್ನುವುದು ಗಮನಿಸತಕ್ಕ ವಿಚಾರವಾಗಿದೆ.

ಆಕೆ ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದು ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದಾಳೆ. ತನ್ನ ಪತಿ ಅಥವಾ ಅವನ ಕುಟುಂಬಕ್ಕೆ ಹಾನಿ ಮಾಡಲು ಪ್ರಯತ್ನಿಸಿದರೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ತನ್ನ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾಳೆ!

ಸದ್ಯ ಈ ವಿಡಿಯೋ ಈಗ ವೈರಲ್ ಆಗಿದೆ. ಖುಶಿ ಓಡಿಹೋಗಿ ಮದುವೆಯಾಗಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆಕೆ ತನ್ನ ಸ್ವಂತ ನಿರ್ಧಾರದಿಂದ ಗಂಡನನ್ನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲದೇ ಆಕೆ ಅಧಿಕಾರಿಗಳಲ್ಲೂ ಈ ವಿಡಿಯೋವನ್ನು ಗಮನಿಸಲು ಕೇಳಿಕೊಂಡಿದ್ದು ತನ್ನ ಗಂಡ ಅಥವಾ ಆತನ ಕುಟುಂಬದ ವಿರುದ್ಧ ಯಾವುದೇ ಸುಳ್ಳು ಎಫ್ಐಆರ್ ದಾಖಲಿಸಿಕೊಳ್ಳದಂತೆ ಕೇಳಿಕೊಂಡಿದ್ದಾಳೆ.

ಓಡಿ ಹೋಗಿದ್ದು ಯಾವಾಗ?

ಖುಶಿ ಕುಮಾರಿ ಬಿಹಾರದ ಪಶ್ಚಿಮ ಚಂಪರನ್ ಜಿಲ್ಲೆಯ ಮಿಶ್ರೌಲಿ ಹಳ್ಳಿಯ ನಿವಾಸಿಯಾಗಿದ್ದು ಈ ಗ್ರಾಮ ಜೋಗಾಪಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಜುಲೈ 26ರಂದು ಮಧ್ಯಾಹ್ನ 1 ಗಂಟೆಗೆ, ಈಕೆ ತನ್ನ ಪ್ರಿಯತಮನೊಂದಿಗೆ ಓಡಿಹೋಗಿ ಬೆಟ್ಟಿಯಾದಲ್ಲಿ ಮದುವೆಯಾದಳು. ಮದುವೆಯ ನಂತರ, ಖುಶಿ ತನ್ನ ಕುಟುಂಬ ಸದಸ್ಯರು ಅವಳ ಮತ್ತು ಅವಳ ಗಂಡನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆಂದು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಸುಳ್ಳು ಎಫ್ಐಆರ್ ಆಧಾರಿತ ತನಿಖೆಯನ್ನು ಪ್ರಾರಂಭಿಸದಂತೆ ಅವರು ಜೋಗಾಪಟ್ಟಿ ಪೊಲೀಸ್ ಠಾಣೆಯ ಡಿಎಂ ಮತ್ತು ಎಸ್​ಪಿಗೆ ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ಖುಶಿ, ತನ್ನ ಪ್ರೇಮಿಗೆ ಓಡಿಹೋಗಿ ಮದುವೆಯಾಗಲು ಇಷ್ಟವಿರಲಿಲ್ಲ ಎಂದು ಹೇಳಿದ್ದು ನಂತರ ಆಕೆ ಆತನ ಮನವೊಲಿಸಿದ್ದಳು ಎಂಬುದನ್ನೂ ವಿವರಿಸಿದ್ದಾಳೆ. ಆಕೆಯ ಪ್ರಕಾರ, ಆರಂಭದಲ್ಲಿ ಆತ ಓಡಹೋಗಿ ಮದುವೆಯಾಲು ವಿರೋಧಿಸಿದ್ದ. ಆದರೆ ಅವನು ಬಾರದಿದ್ದರೆ, ತಾನು ಆತ್ಮಹತ್ಯೆಯ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇದನ್ನು ಕೇಳಿದ ಆಕೆಯ ಪ್ರೇಮಿ ಮದುವೆಗೆ ಒಪ್ಪಿದ್ದು, ಬೆಟ್ಟೀಯದ ದೇವಾಲಯದಲ್ಲಿ ವಿವಾಹವಾದರು.

ಓಡಿ ಹೋಗಿ ಗುಡುಗಿದ ಯುವತಿ

“ನಾನು ಎಷ್ಟು ಹಠಮಾರಿ ಎಂದು ನಿಮಗೆ ತಿಳಿದಿದೆ. ನಾನು ಎಲ್ಲರನ್ನೂ ಕೋರ್ಟ್​ ಕಟಕಟೆಗೆ ಎಳೆಯುತ್ತೇನೆ” ಎಂದು ವಿಡಿಯೋದಲ್ಲಿ ಖುಶಿ ಕುಮಾರಿ ಹೇಳಿಕೊಂಡಿದ್ದಾಳೆ. ಅವಳ ವಿರುದ್ಧದ ಕ್ರಮಗಳ ಸಂಭವನೀಯ ಪರಿಣಾಮಗಳನ್ನು ಎತ್ತಿ ತೋರಿಸುತ್ತಾ ಆಕೆ ಈ ಮಾತನ್ನು ಹೇಳಿದ್ದಾಳೆ. ಈ ವಿಷಯಕ್ಕಾಗಿ ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ಗೆ ಬೇಕಾದರೂ ಹೋಗುವುದಾಗಿ ಹೇಳಿದ್ದಾಳೆ. ಅವಳು ತನ್ನ ಗಂಡನೊಂದಿಗೆ ಸಂತೋಷವಾಗಿದ್ದು ಯಾವುದೇ ತೊಂದರೆ ಎದುರಿಸುತ್ತಿಲ್ಲ ಎಂದು ಹೇಳಿದ್ದಾರೆ. ವಿಡಿಯೋದ ಕೊನೆಯಲ್ಲಿ, ಖುಶಿ ಕುಮಾರಿ, ಪೋಷಕರು ಮತ್ತು ತನ್ನ ಹಳ್ಳಿಯ ಜನರಿಂದ ತನಗೆ ಸುರಕ್ಷತೆಯನ್ನು ಒದಗಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಕೇಳಿದ್ದಾರೆ. (ಏಜೆನ್ಸೀಸ್)