More

    ಇಳಿಯಿತು ಗಿಡಗಳ ದರ: ಪರಿಸರ ಪ್ರೇಮಿಗಳು ಖುಷ್

    ಉಳ್ಳಾಲ: ಏಕಾಏಕಿ ಹೆಚ್ಚಳವಾಗಿದ್ದ ಗಿಡಗಳ ದರ ಇಳಿಸಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ಪರಿಸರಪ್ರೇಮಿಗಳು ಸಂತುಷ್ಟರಾಗಿದ್ದಾರೆ.
    ಅರಣ್ಯ ಇಲಾಖೆಯಿಂದ 1 ರೂ.ಗೆ ನೀಡಲಾಗುತ್ತಿದ್ದ ಗಿಡದ ದರ 7 ರೂ., 3 ರೂಪಾಯಿಗೆ ನೀಡಲಾಗುತ್ತಿದ್ದ ಗಿಡದ ದರವನ್ನು 23 ರೂ.ಗೆ ಏರಿಸಿತ್ತು. ಸರ್ಕಾರದ ಆದೇಶದಂತೆ ಪ್ರಸ್ತುತ ಅವಧಿಯಲ್ಲೇ ಹೊಸ ದರ ಜಾರಿಗೆ ತರಲಾಗಿತ್ತು. ಪರಿಣಾಮ ಈ ಮಳೆಗಾಲದಲ್ಲಿ ಗಿಡಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕುಸಿದಿತ್ತು. ಈ ಬಗ್ಗೆ ‘ವಿಜಯವಾಣಿ’ ಜೂನ್ 22ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು. ಇದರ ಲವಾಗಿ ಗಿಡಗಳ ದರ ಇಳಿಕೆಯಾಗಿದೆ.

    ಸರ್ಕಾರ 1 ರೂ.ಗೆ ನೀಡಲಾಗುತ್ತಿದ್ದ ಗಿಡಕ್ಕೆ 7 ರೂ. ಮಾಡಿದ್ದರೆ ಈಗ 4 ರೂ. ಕಡಿಮೆಗೊಳಿಸಿದೆ. 3 ರೂ. ಇದ್ದ ಗಿಡಕ್ಕೆ 23 ರೂ. ಮಾಡಿದ್ದ ಸರ್ಕಾರ ಈಗ 6 ರೂ. ನಿಗದಿಪಡಿಸುವ ಮೂಲಕ 17 ರೂ. ಇಳಿಸಿದೆ. ‘ವಿಜಯವಾಣಿ’ ವರದಿ ಬಳಿಕ ಗಿಡಗಳ ದರ ಇಳಿದಿರುವ ಬಗ್ಗೆ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

    ದರ ಏರಿಕೆಗಿದ್ದ ಕಾರಣಗಳು:
    8×12 ಗಿಡವೊಂದಕ್ಕೆ ಉತ್ಪಾದನಾ ವೆಚ್ಚ 39.20 ರೂ. ಆಗಿದ್ದು ಅದರಲ್ಲಿ ಶೇ.30 ಕಡಿತಗೊಳಿಸಿ 23 ನಿಗದಿಪಡಿಸಲಾಗಿದೆ. 6×9 ಗಿಡಕ್ಕೆ 12.88 ರೂ. ಖರ್ಚಾಗುತ್ತಿದ್ದು ಶೇ.50 ಕಡಿತಗೊಳಿಸಿ 6 ರೂಪಾಯಿ ದರ ನಿಗದಿಪಡಿಸಲಾಗಿದೆ. ಈ ವರ್ಷ 25 ಸಾವಿರ 8×12 ಹಾಗೂ 50 ಸಾವಿರ 6×9 ಗಿಡಗಳನ್ನು ಬೆಳೆಸಿ ನಷ್ಟದ ಹಾದಿಗೆ ಕಡಿವಾಣ ಹಾಕಲು ಸರ್ಕಾರ ಬಯಸಿತ್ತು. ಆದರೆ ದರ ಏರಿಕೆಯಿಂದ ಗಿಡಗಳ ಮಾರಾಟ ಕುಂಠಿತವಾದ ಕಾರಣ ಮತ್ತೆ ಪರಿಷ್ಕರಿಸಲಾಗಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts