'ನಾವೂ ಪತ್ರಕರ್ತರು' ಎಂದು ಹೇಳಿಕೊಂಡು ಜನರನ್ನು ಲೂಟಿ ಮಾಡುತ್ತಿದ್ದವರು ಅಂದರ್

crime
Published on

ಬೆಂಗಳೂರು: ಪತ್ರಿಕೋದ್ಯಮ ಎಂದರೆ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಬ ಎಂದೇ ಹೇಳಲಾಗುತ್ತದೆ. ಜನರ ಸಮಸ್ಯೆಗಳನ್ನು ವರದಿ ಮಾಡುವುದೇ ಕರ್ತವ್ಯ. ಈ ಮೂಲಕ ಸಮಾಜದಲ್ಲಿ ಜಾಗೃತಿ ತರುವ ಕೆಲಸ ಪತ್ರಕರ್ತರದ್ದು.

ಪತ್ರಕರ್ತರ ಸೋಗಿನಲ್ಲಿ ಖದೀಮರು ಇವರು!

ಆದರೆ ಇಲ್ಲಿ ಮಾತ್ರ ಕೆಲ ಖದೀಮರು, ತಮ್ಮನ್ನು ತಾವು ಪತ್ರಕರ್ತರು ಎಂದು ಹೇಳಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದರು. ಇದೀಗ "ನಾವು ಕನ್ನಡ ನ್ಯೂಸ್ ಚಾನೆಲ್​ನವರು" ಎಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ 4 ಜನರನ್ನು ಬಂಧಿಸಲಾಗಿದೆ

ಬಂಧಿತರನ್ನು ಆನಂದ್, ಕೇಶವಮೂರ್ತಿ, ಶ್ರೀನಿವಾಸ್, ಆತ್ಮಾನಂದ್ ಎಂದು ಗುರುತಿಸಲಾಗಿದೆ. ಇವರು ತಮ್ಮನ್ನು ತಾವು, ಎ.ಕೆ ನ್ಯೂಸ್ ಚಾನೆಲ್​ನವರು ಎಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದರು.

ಹೇಗಿತ್ತು ಇವರ ಪ್ಲ್ಯಾನಿಂಗ್?

ಇವರು, ಕೆಲ ವ್ಯಕ್ತಿಗಳ ಬಳಿ ಹೋಗಿ "ನಿಮ್ಮ ಬಗ್ಗೆ ಸುದ್ದಿ ಬರೆದು ಪ್ರಸಾರ ಮಾಡುತ್ತೇವೆ. ಪೊಲೀಸರಿಗೆ ಹೇಳಿ ಕ್ರಿಮಿನಲ್ ಕೇಸ್ ದಾಖಲು ಮಾಡಿಸುತ್ತೇವೆ" ಎಂದು ಬೆದರಿಸುತ್ತಿದ್ದ ಆಸಾಮಿಗಳು ನಂತರ ಹಣ ಸುಮ್ಮನಾಗಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು.

ಈ ಬಗ್ಗೆ ಸಾರ್ವಜನಿಕರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಈ ಕೇಸ್​ಅನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net