Ghaati Release: ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಘಾಟಿ’ ಚಿತ್ರದ ರಿಲೀಸ್ ಕುರಿತು ನಟಿಯ ಅಭಿಮಾನಿಗಳು ಮತ್ತು ಸಿನಿಪ್ರಿಯರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಕ್ರಿಶ್ ನಿರ್ದೇಶನದ ಹಾಗೂ ಅನುಷ್ಕಾ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸೇರಿದಂತೆ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾ ಇನ್ನೇನು ತೆರೆಗೆ ಅಪ್ಪಳಿಸುವುದು ಮಾತ್ರ ಬಾಕಿ ಉಳಿದಿದೆ. ಈ ಹಿಂದೆ ನಿಗದಿಪಡಿಸಿದ ದಿನಾಂಕದಂದು ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ನಿರ್ಮಾಪಕರ ನಿರ್ಧಾರ ಬದಲಾವಣೆಗಳಿಂದ ಇದೀಗ ರಿಲೀಸ್ ದಿನಾಂಕ ಮುಂದೂಡಿಕೆಯಾಗಿದೆ.
ಇದನ್ನೂ ಓದಿ: ಧೋನಿ, ಜಡೇಜಾ, ಪತಿರಾನ.. CSK ಪ್ಲೇಆಫ್ ಕನಸು ಛಿದ್ರಗೊಳ್ಳಲು ಈ ಮೂವರೇ ಕಾರಣ! ಮಾಜಿ ಕ್ರಿಕೆಟಿಗ ಕಿಡಿನುಡಿ
ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆದಿರುವ ನಿರ್ದೇಶಕರು, ಅನುಷ್ಕಾ ಅವರ ನಟನೆಯಲ್ಲಿ ಚಿತ್ರಪ್ರೇಮಿಗಳ ಗಮನ ಸೆಳೆಯಲು ಎದುರುನೋಡುತ್ತಿದ್ದಾರೆ. ಒಂದಷ್ಟು ಸಮಯದ ನಂತರ ಮತ್ತೆ ತೆರೆಗೆ ಬರಲು ಸಜ್ಜಾಗಿರುವ ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತೀವ್ರ ಕಾತರ, ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಏಪ್ರಿಲ್ 18ರಂದು ರಿಲೀಸ್ ಆಗಬೇಕಿದ್ದ ಘಾಟಿ ಇದೀಗ ಮುಂದೂಡಿಕೆ ಆಗಿದ್ದು, ಯಾವ ದಿನದಂದು ತೆರೆ ಕಾಣಲಿದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ವರದಿಗಳ ಪ್ರಕಾರ, ಮೇ ತಿಂಗಳಿಗೆ ಬಿಡುಗಡೆ ಮಾಡುವ ಉದ್ದೇಶದಲ್ಲಿ ಚಿತ್ರತಂಡ ಮುಂದೂಡಿಕೆ ಮಾಡಿದೆ ಎಂದು ಹೇಳಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಘೋಷಣೆ ಇನ್ನೂ ಪ್ರಕಟವಾಗಿಲ್ಲ. ಇದೇ ಜೂನ್ ಕೊನೆ ವಾರ ಅಥವಾ ಜುಲೈನಲ್ಲಿ ಘಾಟಿ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ಭಾಗಗಳ ದೃಶ್ಯ ಪರಿಣಾಮಗಳಲ್ಲಿನ ವಿಳಂಬವೇ ಚಿತ್ರದ ಮುಂದೂಡಿಕೆಗೆ ಕಾರಣ ಎಂದು ಹೇಳಲಾಗಿದೆ,(ಏಜೆನ್ಸೀಸ್).