ನ್ಯೂಸ್

13 ಟನ್ ತೂಕ, 20.5 ಅಡಿ ಉದ್ದ! ಇರಾನ್​ ಮೇಲೆ ಯುಎಸ್​ ಬೀಳಿಸಿದ ಬಾಂಬ್​ನ ಸಾಮರ್ಥ್ಯವೇನು? ಇಲ್ಲಿದೆ ಮಾಹಿತಿ | GBU-57

ಮೋಹನ್​ ಶೆಟ್ಟಿ

GBU-57 Bunker: ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ಇದಕ್ಕೆ ಕಾರಣ, ಡೋನಾಲ್ಡ್ ಟ್ರಂಪ್​ ನೇತೃತ್ವದ ಅಮೆರಿಕ ನಡೆಸಿದ ವೈಮಾನಿಕ ದಾಳಿ. ಇರಾನ್​ ಮೇಲಿನ ದಾಳಿಯಲ್ಲಿ ವರ್ಷಗಳಿಂದ ಇಸ್ರೇಲ್ ಅನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿಕೊಂಡು ಬಂದಿರುವ ಅಮೆರಿಕ, ಇಂದು ನೇರವಾಗಿ ಸಮರಕ್ಕೆ ಇಳಿದಿದೆ. ಅಷ್ಟಾಗಿ ಎಲ್ಲಿಯೂ ಉಪಯೋಗಿಸಿದ ಬಂಕರ್​ ಬಾಂಬ್​ ಅನ್ನು ಇರಾನ್​ ಮೇಲೆ ಪ್ರಯೋಗಿಸುವ ಮೂಲಕ ಇರಾನ್​-ಇಸ್ರೇಲ್ ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದೆ.

ಅಮೆರಿಕ ಸೇನೆ ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಪರಮಾಣು ಕೇಂದ್ರಗಳನ್ನು ಛಿದ್ರಗೊಳಿಸಿದ ಯುಎಸ್​ ಸೇನೆ, ಇರಾನ್ ಮೇಲೆ ಆರು ಬಲಿಷ್ಠ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬೀಳಿಸಿದೆ. ಅಮೆರಿಕ ಸೇನಾ ಬಂಕರ್ ಬಸ್ಟರ್ ಎಂದೂ ಕರೆಯಲ್ಪಡುವ ಈ BBU-57 ಬೃಹತ್ ಆರ್ಡನೆನ್ಸ್ ಪೆನೆಟ್ರೇಟರ್ (MOP) ಬಾಂಬ್, ಇರಾನ್​ಗೆ ದೊಡ್ಡ ನಷ್ಟವನ್ನೇ ಉಂಟುಮಾಡಿದೆ.

ಅತ್ಯಂತ ಶಕ್ತಿಶಾಲಿ 'ಬಂಕರ್ ಬಸ್ಟರ್'

ಯುಎಸ್ ವಾಯುಪಡೆಯ ಪ್ರಕಾರ, ಬಂಕರ್ ಬಸ್ಟರ್ ಎಂದೂ ಕರೆಯಲ್ಪಡುವ GBU-57 MOP ಬೋಯಿಂಗ್ ಕಂಪನಿಯ ಸಹಯೋಗದೊಂದಿಗೆ ಅಮೆರಿಕ ಅಭಿವೃದ್ಧಿಪಡಿಸಿದೆ. ಇದೊಂದು ದೊಡ್ಡ, ಅತ್ಯಂತ ಶಕ್ತಿಶಾಲಿ ಬಾಂಬ್ ಎಂದು ಪರಿಗಣಿಸಲಾಗಿದೆ. ಈ ಬಂಕರ್ ಬಸ್ಟರ್ ಸುಮಾರು 20.5 ಅಡಿ ಉದ್ದ ಮತ್ತು 31.5 ಇಂಚು ವ್ಯಾಸವನ್ನು ಹೊಂದಿದೆ. ಇದರ ತೂಕ ಸುಮಾರು 13,000 ಕೆಜಿ. ಈ ಬಂಕರ್ ಬಸ್ಟರ್ ಬಾಂಬ್ ಭೂಗತಕ್ಕೆ ವೇಗವಾಗಿ ನುಗ್ಗುವುದರ ಜೊತೆಗೆ ಗುರಿಗಳನ್ನು ಛಿದ್ರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 200 ಅಡಿ ಮಣ್ಣಿನ ಆಳಕ್ಕೆ ಹಾಗೂ 60 ಅಡಿ ಕಾಂಕ್ರೀಟ್ ಅನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚು ಬಾಳಿಕೆ ಬರುವ ಲೋಹದ ಮಿಶ್ರದಿಂದ ಮಾಡಿದ ಕವಚದಲ್ಲಿ ಬಾಂಬ್ ಸುಮಾರು 80 ಪ್ರತಿಶತ ತೂಗುತ್ತದೆ. ಇದು ಕೇವಲ ಎರಡು ಟನ್ ಸ್ಫೋಟಕಗಳನ್ನು ಹೊಂದಿವೆ. ಆದಾಗ್ಯೂ, ಈ ಬಾಂಬ್‌ಗಳನ್ನು ಸಾಗಿಸಲು ಸಾಧ್ಯವಾಗುವಂತೆ ಯುಎಸ್ ತನ್ನ ಬಿ-2 ಸ್ಪಿರಿಟ್ ಫೈಟರ್ ಬಾಂಬರ್‌ಗಳನ್ನು ಮಾರ್ಪಡಿಸಿದೆ. ಪ್ರತಿ ಬಿ-2 ಸ್ಪಿರಿಟ್ ಎರಡು ಬಂಕರ್ ಬಸ್ಟರ್‌ಗಳನ್ನು ಸಾಗಿಸಬಲ್ಲದು. ವಾಯುಪಡೆಯ ಫ್ಯಾಕ್ಟ್ ಶೀಟ್ ಪ್ರಕಾರ, ಇರಾನ್‌ನಲ್ಲಿರುವ ಫೋರ್ಡೋ ಸೈಟ್ ಸುಮಾರು 90 ಮೀಟರ್ ಭೂಗತದಲ್ಲಿದೆ. ಅಮೆರಿಕ ದಾಳಿಗೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

GBU-57 ವಿಶೇಷತೆಗಳು

  • 13 ಟನ್​ ಕೆಜಿ ತೂಕ
  • 20.5 ಅಡಿ ಉದ್ದ (ಸುಮಾರು 6.25 ಮೀಟರ್).
  • 5,300 ಪೌಂಡ್‌ (2,400 ಕೆಜಿ) ಸ್ಫೋಟಕಗಳಿಂದ ಕೂಡಿದೆ.
  • ಮಾರ್ಗದರ್ಶನ ವ್ಯವಸ್ಥೆ: GPS-ಆಧಾರಿತ ನಿಖರ ಮಾರ್ಗದರ್ಶನ, ಇದು ಗುರಿಯನ್ನು ನಿಖರತೆಯೊಂದಿಗೆ ದಾಳಿ ಮಾಡುವಲ್ಲಿ ಮೊದಲು.
  • ವಾಹಕ ವಿಮಾನ: B-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್ ಮಾತ್ರ ಈ ಬಾಂಬ್ ಅನ್ನು ಹೊತ್ತೊಯ್ಯಬಲ್ಲದು. ಕಾರಣ, ಇದು ಅಧಿಕ ತೂಕ ಮತ್ತು ಬೃಹತ್​ ಆಗಿದೆ. B-3 ಎರಡು GBU-57 ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲದು.
  • ಸಾಮರ್ಥ್ಯ: ಆಳವಾದ ಬಂಕರ್‌ಗಳು, ಸುರಂಗಗಳು ಮತ್ತು ಬಲವರ್ಧಿತ ಕಾಂಕ್ರೀಟ್ ಗೋಡೆಗಳನ್ನು ಛಿದ್ರಗೊಳಿಸುತ್ತದೆ,(ಏಜೆನ್ಸೀಸ್).