ವಾರಂಗಲ್: ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವೇಳೆ ಕುಡುಕನೊಬ್ಬ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ವಾರಂಗಲ್ ಬಳಿ ನಡೆದಿದೆ.
ಇದನ್ನೂ ಓದಿ: ಮಗಳ ಕೂದಲು ಹಿಡಿದು ಎಳೆದಾಡಿ ಚಾಕುವಿನಿಂದ 15 ಬಾರಿ ಇರಿದ ತಂದೆ..
ವಾರಂಗಲ್ ಪ್ರಧಾನ ಅಂಚೆ ಕಚೇರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಶನಿವಾರ ಸಂಜೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡುತ್ತಿದ್ದರು. ಈ ವೇಳೆ ಶಿವನಗರ ಬಡಾವಣೆಯ ಪುಲಿಸೇರು ಶಿವ ಎಂಬ ವ್ಯಕ್ತಿ ಮದ್ಯ ಸೇವಿಸಿ ಬಂದಿದ್ದು, ಅಧಿಕಾರಿಗಳನ್ನು ಕಂಡು ತನ್ನ ಬೈಕ್ನಿಂದ ರಸ್ತೆ ದಾಟಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನನ್ನು ಹಿಡಿದು ತಪಾಸಣೆ ನಡೆಸಿದ್ದಾರೆ.