ಬೆಂಗಳೂರು: ಫ್ರೀಫೈರ್ ಗೇಮ್ ಚಟಕ್ಕೆ ಬಿದ್ದ ಅಕ್ಕನ ಮಗನನ್ನು ಸ್ವತಃ ಮಾವನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂಬಾರಹಳ್ಳಿ ವಿನಾಯಕ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ನಾಗಪ್ರಸಾದ್ ಎಂಬಾತನ ಮೇಲೆ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಶಿಲ್ಪಾ ಎಂಬಾಕೆಯ ಮಗನಾಗಿದ್ದ ಅಮೋಘ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆ ವಾಸವಿದ್ದ. ಈ ವೇಳೆ ಬಾಲಕ ಮೊಬೈಲ್ನಲ್ಲಿ ಫ್ರೀ ಫೈಯರ್ ಗೇಮ್ಗೆ ಅಡಿಕ್ಟ್ ಆಗಿದ್ದ. ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಬೇಸತ್ತ ನಾಗಪ್ರಸಾದ್ ಬಾಲಕನ ಕತ್ತು ಸೀಳಿ ಕೊಂದಿದ್ದಾನೆ ಎನ್ನಲಾಗಿದೆ.
ಅಮೋಘ ಕೀರ್ತಿ ಎಂಬ ಬಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಾಲಕನ ಮಾವನನ್ನು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: 'ಬಿಗ್ ಬಾಸ್'ನಲ್ಲಿ ಸ್ಪರ್ಧಿಸಲು 6 ಕೋಟಿ ಆಫರ್; ರಿಜೆಕ್ಟ್ ಮಾಡಿದ ನಟಿ; ಕಾರಣ ಏನಿರಬಹುದು.?bigg-boss
(ಏಜೆನ್ಸೀಸ್)
ಸೋಮವಾರ ಬೆಳಗಿನ ಜಾವ 4.30ಕ್ಕೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ನಾಗಪ್ರಸಾದ್, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನಂತೆ. ಬಳಿಕ ಎಲ್ಲಿಗಾದರೂ ಹೋಗೋಣವೆಂದು ಮೆಜೆಸ್ಟಿಕ್ಗೆ ಬಂದು ಮೂರು ದಿನಗಳ ಕಾಲ ಬಸ್ ನಿಲ್ದಾಣದಲ್ಲೇ ಕಳೆದಿದ್ದಾನೆ. ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದಾನೆ ಎನ್ನಲಾಗಿದೆ. ಇದೀಗ ನಾಗಪ್ರಸಾದ್ ಪೊಲೀಸರ ಅತಿಥಿಯಾಗಿದ್ದಾನೆ.