ಸಾಂದರ್ಭಿಕ ಚಿತ್ರ 
ನ್ಯೂಸ್

3 ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತದೇಹವಾಗಿ ಪತ್ತೆ: ಅನುಮಾನ ಮೂಡಿಸಿದ 'ಆಕೆ'ಯ ನಡೆ..

ನುಹ್​​: ಮೂರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹರ್ಯಾಣದ ನುಹ್​ ಬಳಿಯ ಗಾಂಗೂಲಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಹೆತ್ತವರಿಂದಲೇ ಮಗನ ಕಿಡ್ನ್ಯಾಪ್ ನಾಟಕ​: ವೈರಿ ಸಿಲುಕಿಸಲು ನಡೆದಿತ್ತು ಪ್ಲ್ಯಾನ್, ಕೊನೆಗೆ..

ಮೃತರನ್ನು ಜೀತ್ ಸಿಂಗ್ ಅಲಿಯಾಸ್ ಜೀತನ್(34) ಕಿಲಾಡಿ(12), ಪ್ರಿಯಾಂಶು(7) ಮತ್ತು ರಾಧಿಕಾ(10) ಎಂದು ಗುರುತಿಸಲಾಗಿದೆ. ಇನ್ನು ನೇಣು ಬಿಗಿದ ಸ್ಥಿತಿಯಲ್ಲಿ ಜೀತ್​ನ ಮೃತದೇಹ ಪತ್ತೆಯಾಗಿದ್ದರೆ, ಅಮಾಯಕರು ವಿಷ ಕುಡಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ, ಇನ್ನು ಜೀತ್​ನ ಪತ್ನಿಯೇ ಪತಿ ಹಾಗೂ ಮಕ್ಕಳನ್ನು ಕೊಂದಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸರಿಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಮೃತ ಜೀತ್ ಹಾಗೂ ಮೀನಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೀನಾ ಮನೆಯಿಂದ ಹಲವು ದಿನಗಳಿಂದ ನಾಪತ್ತೆಯಾಗುತ್ತಿದ್ದಳು. ಎಲ್ಲಿ ಹೋಗುತ್ತಿದ್ದಳು ಎಂಬುದರ ಬಗ್ಗೆ ಗಂಡನಿಗೆ ಮಾಹಿತಿಯೇ ಇರುತ್ತಿರಲಿಲ್ಲ. ಇದರಿಂದಾಗಿ ಜೀತ್ ಮತ್ತು ಆತನ ಕುಟುಂಬದ ಸದಸ್ಯರು ಆಕೆಯ ನಡುವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದರೆ ಜತೆಗೆ ಆಕೆಯ ಪಾಲಕರಿಗೂ ತಿಳಿಸಿದ್ದನು.

ಆದರೆ ಇಷ್ಟಾದರೂ ಕೂಡ ಮೀನಾ ಸುಧಾರಣೆಯಾಗಿರಲಿಲ್ಲ. ಬೆಳಿಗ್ಗೆ ಬಂದು ಸಂಬಂಧಿಕರು ಮನೆ ತೆರೆದು ನೋಡಿದಾಗಲೇ ಕೃತ್ಯದ ಘಟನೆ ಬೆಳಕಿಗೆ ಬಂದಿದ್ದು, ಘಟನೆ ಬಳಿಕ ಮೀನಾ ನಾಪತ್ತೆಯಾಗಿರುವುದು ಸಂಶಯವನ್ನು ಮೂಡಿಸಿದೆ. ಇನ್ನು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ರೋಜ್‌ಕಮೇವ್ ಠಾಣೆ ಪೊಲೀಸರು, ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ. ಇದೇ ವೇಳೆ ಪೊಲೀಸರು ಎಲ್ಲ ಆಯಾಮಗಳ ಮೇಲೂ ಗಮನಹರಿಸಿ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)