ನ್ಯೂಸ್

ಬಾಲಿವುಡ್​ ನಟಿ ರೇಖಾ ಬಂಗಲೆಯಲ್ಲಿನ ಇನ್ನೂ ನಾಲ್ವರು ಗಾರ್ಡ್​ಗಳಿಗೆ ಕರೊನಾ!

ಇತ್ತೀಚೆಗಷ್ಟೇ ಬಾಲಿವುಡ್​ ನಟಿ ರೇಖಾ ಅವರ ಬಂಗಲೆಯಲ್ಲಿ ಕೆಲಸ ಮಾಡುತ್ತಿರುವ ಸೆಕ್ಯುರಿಟಿ ಗಾರ್ಡ್​ಗೆ ಕರೊನಾ ಧೃಡಪಟ್ಟ ಹಿನ್ನೆಲೆಯಲ್ಲಿ ಇಡೀ ಬಂಗಲೆಯನ್ನೇ ಸೀಲ್​ ಮಾಡಿ, ಆ ಪ್ರದೇಶವನ್ನು ಕಂಟೇನ್ಮೆಂಟ್​ ಝೋನ್​ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಅಚ್ಚರಿ ವಿಚಾರ ಏನೆಂದರೆ, ಅದೇ ಬಂಗಲೆಯಲ್ಲಿನ ನಾಲ್ವರು ಭದ್ರತಾ ಸಿಬ್ಬಂದಿಗೆ ಕರೊನಾ ಪಾಸಿಟಿವ್​ ಇರುವುದು ವರದಿಯಾಗಿದೆ.

ಈ ಮೊದಲು ಒಂದೇ ಪ್ರಕರಣ ಸಿಕ್ಕ ಬೆನ್ನಲ್ಲೇ ಮುಂಬೈನಲ್ಲಿರುವ ಬಂಗಲೆ ಸೀಲ್​ಡೌನ್​ ಮಾಡಲಾಗಿತ್ತು. ಅವರ ನಿವಾಸ ಇರುವ ಪ್ರದೇಶವನ್ನು ಕಂಟೇನ್​ಮೆಂಟ್​ ಝೋನ್​ ಎಂದು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಶನ್​ ಗುರುತಿಸಿತ್ತು. ಇದೀಗ ಮತ್ತೆ ನಾಲ್ಕು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಕೋವಿಡ್​ ಪರೀಕ್ಷೆಗೆ ಒಳಗಾಗುವಂತೆ ನಟಿಗೆ ಬಿಎಂಸಿ ಮನವಿ ಮಾಡಿದೆ. ಆದರೆ, ನನಗೇನು ಆಗಿಲ್ಲ. ನಾನು ಫಿಟ್ ಆ್ಯಂಡ್​ ಫೈನ್​ ಎಂದು ಹೇಳಿ ಪರೀಕ್ಷೆಗೆ ನಿರಾಕರಿಸಿದ್ದಾರೆ.

ಮಹಾರಾಷ್ಟ್ರ, ಮುಂಬೈನಲ್ಲಿ ಕರೊನಾ ಸಿಕ್ಕಾಪಟೆ ಹೆಚ್ಚುತ್ತಿದೆ. ಬಾಲಿವುಡ್​ ಸೆಲೆಬ್ರಿಟಿಗಳ ಮನೆಗೂ ಕಾಲಿಟ್ಟಿದೆ. ಅಮಿತಾಬ್​ ಬಚ್ಚನ್​, ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ಕರೊನಾಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ವಾರ ಅಮಿರ್​ ಖಾನ್​, ಕರಣ್​ ಜೋಹರ್​ ಮತ್ತು ಬೋನಿ ಕಪೂರ್​ ಅವರ ಮನೆಯ ಕೆಲಸದವರಲ್ಲಿ ಕರೊನಾ ಕಾಣಿಸಿಕೊಂಡಿತ್ತು. (ಏಜೆನ್ಸೀಸ್​)