ನ್ಯೂಸ್

ಕಾರಿನಲ್ಲಿ ಫೈನಾನ್ಸಿಯರ್​ನನ್ನು ಕಿಡ್ನ್ಯಾಪ್​ ಮಾಡಿದವರಿಗೆ ಸಿಕ್ಕಿದ್ದೇನು?

ಆನೇಕಲ್: ಬನ್ನೇರುಘಟ್ಟ ಬಳಿಯ ಸಿ.ಕೆ ಪಾಳ್ಯದಲ್ಲಿ ನಾಲ್ಕು ಜನರಿದ್ದ ತಂಡವೊಂದು ಕಾರಿನಲ್ಲಿ ಫೈನಾನ್ಸಿಯರ್​ನನ್ನು ಅಪಹರಣ ಮಾಡಿದೆ.

ರವಿ ಎಂಬಾತ ಕಿಡ್ನ್ಯಾಪ್​ ಆಗಿದ್ದ ಫೈನಾನ್ಸಿಯರ್​. ಇವರನ್ನು ಶನಿವಾರ ಸಂಜೆ ಮಾರುತಿ ರಿಟ್ಜ್​ ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರು ರವಿಯನ್ನು ಅಪಹರಿಸಿದ್ದಾರೆ.

ರವಿ ಹಣಕಾಸು ವ್ಯವಬಾರ ಮಾಡಿಕೊಂಡಿದ್ದ್ನು ಅರಿತು ಹಣದ ಆಸೆಗಾಗಿ ಆತನನ್ನು ಅಪಹರಿಸಿದ್ದರು ಎನ್ನಲಾಗಿದೆ. ಬಳಿಕ ಕಾರಿನಲ್ಲಿ ರವಿಯನ್ನು ಸುತ್ತಾಡಿಸಿದ ಅಪಹರಣಕಾರರ ತಂಡ ಆತನ ಬಳಿಯಿದ್ದ 6,500 ರೂ. ಕಸಿದುಕೊಂಡಿದೆ. ಬಳಿಕ ಕನಕಪುರ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಈ ಬಗ್ಗೆ ಬನ್ನೇರುಘಟ್ಟ ಪೊಲಿಸರಿಗೆ ಈ ಬಗ್ಗೆ ರವಿ ಮಾಹಿತಿ ನೀಡಿದ್ದಾರೆ. ಈ ಅಪಹರಣದ ದೃಶ್ಯ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಆದರೆ, ಅಪಹರಣದ ಉದ್ದೇಶ ಹಣ ಕಸಿಯುವುದೇ ಆಗಿತ್ತೇ? ಅಥವಾ ಬೇರೆ ಕಾರಣಕ್ಕೆ ಅಪಹರಣ ನಡೆದಿತ್ತೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ.