ನ್ಯೂಸ್

ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ದೆಹಲಿಯ ಆರ್ಮಿ ರಿಸರ್ಚ್​ ಆ್ಯಂಡ್​ ರೆಫೆರಲ್​ ಆಸ್ಪತ್ರೆ ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​ನಲ್ಲಿ ವಿವರಿಸಿದೆ.

84 ವರ್ಷ ವಯದ್ದಿನ ಪ್ರಣಬ್​ ಮುಖರ್ಜಿ ಡೀಪ್​ ಕೋಮಾಗೆ ಜಾರಿದ್ದು, ಇದುವರೆಗೂ ಅವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವರು ಆಳವಾದ ಕೋಮಾದಲ್ಲಿದ್ದು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಅವರ ಪ್ರಮುಖ ನಿಯತಾಂಕಗಳು ಸ್ಥಿರವಾಗಿವೆ ಎಂದು ಆಸ್ವತ್ರೆ ತಿಳಿಸಿದೆ.

ಅನಾರೋಗ್ಯಕ್ಕೀಡಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು ಆ.10ರಂದು ದೆಹಲಿಯ ಕಂಟೋನ್ಮೆಂಟ್‌ನ ಆರ್ಮಿ ರಿಸರ್ಚ್​ ಆ್ಯಂಡ್​ ರೆಫೆರಲ್​ ಆಸ್ಪತ್ರೆ ದಾಖಲಿಸಲಾಗಿತ್ತು. ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಸರ್ಜರಿ ಮಾಡಲಾಗಿದ್ದು, ಬಳಿಕ ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ. ಇದಲ್ಲದೆ ಅವರಿಗೆ ಕರೊನಾ ಪಾಸಿಟಿವ್​, ಶ್ವಾಸಕೋಸದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಡೀಪ್​ ಕೋಮಾಕ್ಕೆ ಜಾರಿರುವ ಅವರ ಸ್ಥಿತಿಯಲ್ಲಿ ಸ್ವಲ್ಪವೂ ಬದಲಾವಣೆ ಕಂಡು ಬಂದಿಲ್ಲ. ವೆಂಟಿಲೇಟರ್​ ಸಹಾಯದಲ್ಲಿ ಊಸಿರಾಡುತ್ತಿದ್ದಾರೆ.

ಪ್ರಣಬ್ ಮುಖರ್ಜಿ ಅವರು 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.