ನ್ಯೂಸ್

ಮಾಜಿ ಪ್ರಧಾನಿ Manmohan Singh ನಿಧನ

Webdesk - Manjunatha B

ನವದೆಹಲಿ: ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮೊನಮೋಹನ್​ ಸಿಂಗ್​ (Manmohan Singh) ಅವರು ದೆಹಲಿ ಏಮ್ಸ್​ನಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಮನಮೋಹನ್​ ಸಿಂಗ್​ (Manmohan Singh) ಅವರಿಗೆ 92 ವರ್ಷ ವಯಸ್ಸಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗಿತ್ತಾದರು ಫಲಕಾರಿಯಾಗದೆ ನಿಧನರಾಗಿದ್ದಾರೆ. ರಾತ್ರಿ 9:51ಕ್ಕೆ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಏಮ್ಸ್​ ಆಸ್ಪತ್ರೆಯು ಪ್ರಕಟಣೆ ಮೂಲಕ ತಿಳಿಸಿದೆ.

2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮನಮೋಹನ್​ ಸಿಂಗ್​ ಅವರು ಈ ವರ್ಷದ ಏಪ್ರಿಲ್​ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. 1991ರಲ್ಲಿ ರಾಜಕೀಯ ಪ್ರವೇಶಿಸಿದ ಮನಮೋಹನ್​ ಸಿಂಗ್​ ಅವರು ಪಿವಿ ನರಸಿಂಹ ರಾವ್​ ಅವರ ಸಚಿವ ಸಂಪುಟದಲ್ಲಿ  ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.