ಸ್ಯಾಮ್ ಕಾನ್ಸ್ಟಾಸ್ ಜತೆ Virat Kohli ಕಾಳಗ; ಆಟಗಾರ ನೀಡಿದ ಸ್ಪಷ್ಟನೆ, ದಂಡದ ವಿವರ ಹೀಗಿದೆ

Virat Konstas
Published on

ಮೆಲ್ಬೋರ್ನ್​: ಇಲ್ಲಿನ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್​ (Boxing Day Test) ಪಂದ್ಯದಲ್ಲಿ ಆತಿಥೇಯರು ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 311 ರನ್​ಗಳಿಸಿದೆ. ಮೊದಲ ದಿನದಾಟದ ಗೌರವ ಉಭಯ ತಂಡಗಳಿಗೂ ಹಂಚಿಕೆಯಾಗಿದ್ದು, ಈ ವೇಳೆ ನಡೆದ ಘಟನೆಯೊಂದು ಕ್ರೀಡಾವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್​ ದಿಗ್ಗಜರಿಂದ ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ.

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಪರ ಸ್ಯಾಮ್ ಕಾನ್ಸ್ಟಾಸ್​ ಪದಾರ್ಪಣೆ ಮಾಡಿದ್ದು, ಮೊದಲ ಪಂದ್ಯದಲ್ಲೇ 60 ರನ್​ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದೆಲ್ಲದರ ನಡುವೆ ಕಾನ್ಸ್ಟಾಸ್​ ವಿರಾಟ್​ ಕೊಹ್ಲಿಯೊಂದಿಗೆ (Virat Kohli) ಮಾತಿನ ಚಕಮಕಿ ನಡೆಸಿದ್ದು, ಈ ವಿಚಾರ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಸ್ಲೆಡ್ಜಿಂಗ್​ ಎಂದು ಕೆಲವರು ಆರೋಪಿಸಿದರೆ ಮತ್ತಷ್ಟು ಜನ ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ, ಇದೀಗ ಈ ಬಗ್ಗೆ ಸ್ವತಃ ಸ್ಯಾಮ್ ಕಾನ್ಸ್ಟಾಸ್ ಸ್ಪಷ್ಟನೆ ನೀಡುವ ಮೂಲಕ ಎದ್ದಿರುವ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಕೊಹ್ಲಿ (Virat Kohli) ನನ್ನ ನೆಚ್ಚಿನ ಆಟಗಾರ. ಅವರಿಗೆ ಉದ್ಧೇಶಪೂರ್ವಕವಾಗಿ ನಾನು ಡಿಕ್ಕಿ ಹೊಡೆದಿಲ್ಲ. ಕ್ರಿಕೆಟ್​ನಲ್ಲಿ ಈ ರೀತಿಯ ಘಟನೆಗಳು ಆಗಾಗ ಸಂಭವಿಸುತ್ತವೆ. ಆ ಸಂದರ್ಭದಲ್ಲಿ ನನಗೇನೂ ಅರ್ಥವಾಗಲಿಲ್ಲ. ನಾನು ಗ್ಲೌಸ್​ ಹಾಕಿಕೊಳ್ಳುತ್ತಿದ್ದ ವೇಳೆ ಸಡನ್​ ಆಗಿ ಕೊಹ್ಲಿ ಅವರ ಭುಜ ನನಗೆ ತಾಕಿತು. ಆ ಸಂದರ್ಭದಲ್ಲಿ ನನಗೇನೂ ಅರ್ಥವಾಗಲಿಲ್ಲ. ಕ್ರಿಕೆಟ್​ನಲ್ಲಿ ಇದೆಲ್ಲವೂ ನಡೆಯುತ್ತಿರುತ್ತದೆ ಎಂದು ಹೇಳುವ ಮೂಲಕ ಸ್ಯಾಮ್ ಕಾನ್ಸ್ಟಾಸ್ ಎದ್ದಿರುವ ವಿವಾದವನ್ನು ತಿಳಿಗೊಳಿಸುವ ಕೆಲಸ ಮಾಡಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಹಲವರು ವಿರಾಟ್​ ಕೊಹ್ಲಿ ಅವರದ್ದೆ ತಪ್ಪು ಎಂದು ಆರೋಪಿಸಿದ್ದು, ಕ್ರೀಡಾ ಪಂಡಿತರು ಕೊಹ್ಲಿ ನಡೆಯನ್ನು ಖಂಡಿಸಿದ್ದಾರೆ. ಘಟನೆಯನ್ನು ಪರಿಶೀಲಿಸಿರುವ ಮ್ಯಾಚ್ ರೆಫ್ರಿ ವಿರಾಟ್​ ಕೊಹ್ಲಿಗೆ ಪಂದ್ಯದ ಶುಲ್ಕ ಶೇ. 20ರಷ್ಟು ದಂಡ ವಿಧಿಸಿದ್ದು, ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net