ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಪುತ್ರಿ ಸುಮಾ ವಿಜಯ್ ಅವರು ಇಂದು (ಏಪ್ರಿಲ್ 24) ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಯಾದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸುಮಾ ವಿಜಯ್ ಕಮಲ ಪಕ್ಷವನ್ನು ಸೇರಿದರು.
ಮಾಜಿ ಡಿಸಿಎಂ ದಿವಂಗತ ಎಂ.ಪಿ.ಪ್ರಕಾಶ್ ಪುತ್ರಿ ಎಂ.ಪಿ.ಸುಮಾ ವಿಜಯ, ಅಳಿಯ ವಿಜಯ ಕುಮಾರ್ ಹಿರೇಮಠ, ಮೊಮ್ಮಗ ಸಾತ್ವಿಕ್ ಹಿರೇಮಠ, ಹೂವಿನಹಡಗಲಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಹಣ್ಣಿ ವೀರಮ್ಮ, ಪವಿತ್ರಾ ರಾಮಸ್ವಾಮಿ, ಕೊಡಿಹಳ್ಳಿ ಕೊಟ್ರೇಶ್, ರಾಮಸ್ವಾಮಿ ಚೈತನ್ಯ ಮತ್ತಿರ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ಪಕ್ಷದ ರಾಜ್ಯಾಧ್ಯಕ್ಷ ಸ್ವಾಗತಿಸಿದರು.
ದಿವಂಗತ ಎಂ.ಪಿ. ಪ್ರಕಾಶ್ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. (ದಿಗ್ವಿಜಯ ನ್ಯೂಸ್)