ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಮಾಜಿ ಮುಖ್ಯಮಂತ್ರಿ, ವೈಎಸ್‌ಆರ್‌ಸಿಪಿ ಮುಖಂಡ ಜಗನ್ ಮೋಹನ್ ರೆಡ್ಡಿ ಅವರ ಬೆಂಗಾಲು ಪಡೆಯ ವಾಹನಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು 54 ವರ್ಷದ ಚೀಲಿ ಸಿಂಗಯ್ಯ ಎಂದು ಗುರುತಿಸಲಾಗಿದ್ದು, ಜೂ. 18ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 13 ಟನ್ ತೂಕ, 20.5 ಅಡಿ ಉದ್ದ! ಇರಾನ್ ಮೇಲೆ ಯುಎಸ್ ಬೀಳಿಸಿದ ಬಾಂಬ್ನ ಸಾಮರ್ಥ್ಯವೇನು? ಇಲ್ಲಿದೆ ಮಾಹಿತಿ | GBU-57
ಗುಂಟೂರು ಜಿಲ್ಲಿಯಲ್ಲಿ ವೈಎಸ್ಆರ್‌ಸಿಪಿ ಪಕ್ಷದ ಬೃಹತ್ ರ‍್ಯಾಲಿ ಆಯೋಜಿಸಲಾಗಿತ್ತು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರಿನ ಮೂಲಕ ಆಗಮಿಸಿದ್ದಾರೆ. ರ‍್ಯಾಲಿಗಾಗಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ, ಜಗನ್ ಕಾರು ಸುತ್ತುವರಿದಿದ್ದಾರೆ. ಈ ನೂಕಾಟ ತಳ್ಳಾಟದಲ್ಲಿ ಚೀಲಿ ಸಿಂಗಯ್ಯ ಕಾರಿನಡಿಗೆ ಬಿದ್ದಿದ್ದಾರೆ. ಜನರ ಹರ್ಷೋದ್ಘಾರ ಜಯಘೋಷಗಳು ಮೊಳಗಿದೆ. ಹೀಗಾಗಿ ವ್ಯಕ್ತಿ ಕಾರಿನಡಿಗೆ ಬಿದ್ದರೂ ಯಾರಿಗೂ ಗೊತ್ತೇ ಆಗಿಲ್ಲ. ಇತ್ತ ಪರಿಸ್ಥಿತಿ ಕೈಮೀರುತ್ತಿದ್ದರೂ ಜಗನ್ ಮೋಹನ್ ರೆಡ್ಡಿ ಮಾತ್ರ ಜನರತ್ತಾ ಕೈಬೀಸುತ್ತಾ ತೆರಳಿದ್ದಾರೆ.
ಈ ಸಂಪೂರ್ಣ ಘಟನೆ ಅಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಂಗಯ್ಯ ಕೆಳಗೆ ಬೀಳುವುದು, ವಾಹನ ನಿಲ್ಲದೆ ಅವರ ಕುತ್ತಿಗೆಯ ಮೇಲೆ ಹರಿದು ಹೋಗುವ ದೃಶ್ಯ ಎಂಥವರ ಎದೆಯನ್ನೂ ನಡುಗಿಸುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಜಗನ್ ಅವರ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತು ಬೆಂಗಾವಲು ಪಡೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: 2011ರ IPL ಕೊನೆ! ಜಡೇಜಾ, ವಿವಿಎಸ್ ಲಕ್ಷ್ಮಣ್ಗೆ ಇನ್ನೂ ಸಿಕ್ಕಿಲ್ಲ ಸಂಭಾವನೆ; ಇದು 538 ಕೋಟಿ ರೂ. ವಿಚಾರ
(ಏಜೆನ್ಸೀಸ್)
ನಂತರ ವೈಎಸ್‌ಆರ್‌ಸಿಪಿ ನಾಯಕರು ಮೃತರ ಕುಟುಂಬವನ್ನು ಭೇಟಿ ಮಾಡಿ 10 ಲಕ್ಷ ರೂ.ಗಳ ಚೆಕ್ ಅನ್ನು ಪರಿಹಾರವಾಗಿ ಹಸ್ತಾಂತರಿಸಿದ್ದಾರೆ.
ಆರಂಭದಲ್ಲಿ ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಅವರು ಬೆಂಗಾವಲು ಪಡೆಯಲ್ಲಿದ್ದ ಅಪರಿಚಿತ ವಾಹನವೊಂದು ಸಿಂಗಯ್ಯ ಅವರ ಮೇಲೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದರು. ಆದಾಗ್ಯೂ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕ್ಷೇತ್ರ ವರದಿಗಳನ್ನು ಪರಿಶೀಲಿಸಿದ ಬಳಿಕ, ಪೊಲೀಸರು ಆ ವಾಹನವು ಜಗನ್ ಅವರನ್ನು ಹೊತ್ತೊಯ್ಯುತ್ತಿದ್ದ ವಾಹನವೇ ಎಂದು ದೃಢಪಡಿಸಿದ್ದಾರೆ.
ಜಗನ್ ರೋಡ್ ಶೂ ಮೂಲಕ ತೆರಳುವ ಪ್ಲಾನ್ ಮೊದಲೇ ಮಾಡಲಾಗಿತ್ತು. ಹೀಗಾಗಿ ಮೂರು ವಾಹನ ಹಾಗೂ 100 ಮಂದಿಗೆ ಮಾತ್ರ ಈ ಮೆರಣಿಗೆ, ರೋಡ್ ಶೂನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಜಗನ್ ಕಾರ್ಯಕರ್ತರು, ಬೆಂಬಲಿಗರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಸೇರಿದ್ದರು. ಹೀಗಾಗಿ ಈ ಅನಾಹುತ ಸಂಭವಿಸಿದೆ.