ನ್ಯೂಸ್

ಚಿಕ್ಕಬಳ್ಳಾಪುರದಲ್ಲಿ ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚಿಕ್ಕಬಳ್ಳಾಪುರ: ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ಮಕ್ಕಳು, ವಯಸ್ಕರು, ವೃದ್ಧರು ಸೇರಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಭವಿಸಿದೆ.

ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡು ಸುಸ್ತಾಗಿದ್ದಾರೆ. ಭಾನುವಾರ ರಾತ್ರಿ ನಾಮಕರಣ ಮಹೋತ್ಸವದ ಉಳಿಕೆ ಊಟ ಮಾಡಿದ ಬಳಿಕ ಈ ರೀತಿ ಆಗಿದೆ. ಇದನ್ನೂ ಓದಿರಿ ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೈಪನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬುವವರ ಮನೆಯಲ್ಲಿ ನಾಮಕರಣ ಸಮಾರಂಭ ನಡೆದಿತ್ತು. ಕಾರ್ಯಕ್ರಮದ ನಂತರ ಉಳಿದಿದ್ದ ಊಟವನ್ನು ಈ ಗ್ರಾಮದ ಹಲವರಿಗೆ ಗುರುಪ್ರಸಾದ್ ಕೊಟ್ಟಿದ್ದರು. ಇದನ್ನು ಸೇವಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ.