ನ್ಯೂಸ್

ಬನ್ನಿ ಫ್ಲೈಓವರ್ ಬಾಬಾನ ಆಶೀರ್ವಾದ ಪಡೆಯಿರಿ; Maha Kumbh ಮೇಳದ ವಿಡಿಯೋ ವೈರಲ್

ಪ್ರಯಾಗ್​ರಾಜ್​: ಫೆಬ್ರವರಿ 26ಕ್ಕೆ ಸಂಪನ್ನಗೊಳ್ಳಲಿರುವ ಮಹಾಕುಂಭ ಮೇಳಕ್ಕೆ (Maha Kumbh Mela) ಸಾಗರೋಪಾದಿಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ಒಂದಿಲ್ಲೊಂದು ವಿಚಾರಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ. ಇದೀಗ ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್​ರಾಜ್​ನಿಂದ ಮತ್ತೊಂದು ದೃಶ್ಯ ಹೊರಬಿದ್ದಿದ್ದು, ಅನಿರೀಕ್ಷಿತವಾಗಿ ಸಾಕಷ್ಟು ಜನಮನ್ನಣೆ ಗಳಿಸಿದೆ.

ಮಹಾಕುಂಭ ಮೇಳ (Maha Kumbh Mela) ನಡೆಯುತ್ತಿರುವ ಪ್ರಯಾಗ್​ರಾಜ್​ನಲ್ಲಿ ಇದೀಗ ಫ್ಲೈಓವರ್ ಒಂದು ಸಾಕಷ್ಟು ಜನಮನ್ನಣೆ ಗಳಿಸಿದ್ದು, ಜನರು  ನಮಸ್ಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಜನರು ಫ್ಲೈಓವರ್ ಒಂದರ ಕೆಳಗೆ ನಡೆದು ಹೋಗುತ್ತಿದ್ದು, ಅದರ ಗೋಡೆಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದಾರೆ. ಜನರು ಜೋರಾಗಿ ಜಿಗಿಯುತ್ತ ಘೋಷಣೆಗಳನ್ನು ಕೂಗಿ ಆಶೀರ್ವಾದ ಪಡೆಯುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಜನರ ಮೂರ್ಖತನವನ್ನು ಟೀಕಿಸಿ ಕಮೆಂಟ್ ಹಾಕುತ್ತಿದ್ದು, ಈಗಲೂ ಅಂಧಭಕ್ತಿ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹೇಳಿದ್ದಾರೆ. ಮತ್ತಷ್ಟು ಜನ ಇದು ಯಾವ ದೇವಸ್ಥಾನದ ಆಕಾರ ಅಥವಾ ವಾಸ್ತುಶಿಲ್ಪವನ್ನು ಹೊಂದಿಲ್ಲ. ಇಷ್ಟಾದರು ಜನ ಗೋಡೆಗೆ ಏಕೆ ನಮಸ್ಕರಿಸುತ್ತಿದ್ದಾರೆ ಎಂದು ಕಮೆಂಟ್ ಹಾಕಿ ಪ್ರಶ್ನಿಸಿದ್ದಾರೆ. ಸದ್ಯ ಮಹಾಕುಂಭ ಮೇಳದ (Maha Kumbh Mela) ಈ ವಿಡಿಯೋ ವೈರಲ್ ಆಗಿದ್ದು, ಈವರೆಗೂ 333k ವೀವ್ಸ್ ಪಡೆದುಕೊಂಡಿದೆ.