ಮಂಡ್ಯ : ಕಾಲುವೆಯಲ್ಲಿ ಈಜಲು ಹೋದ ಐವರು ನೀರು ಪಾಲಾಗಿರುವ ಘಟನೆ ಮಂಡ್ಯದ ಬಸರಾಳು ಸಮೀಪದ ದೊಡ್ಡಕೊತ್ತಗೆರೆಯಲ್ಲಿ ನಡೆದಿದೆ.
ನೀರು ಪಾಲಾಗಿರುವ ಐವರು ಯುವತಿಯರು ಬೆಂಗಳೂರಿನ ನೀಲಸಂದ್ರ ಮೂಲದವರಾಗಿದ್ದಾರೆ. ಇವರು ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಈಜಲು ಕಾಲುವೆಗೆ ಧುಮುಕಿದ ವೇಳೆ ಅವಘಡ ಸಂಭವಿಸಿದೆ.
ಈ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಈಗಾಗಲೇ ಮೂವರ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮಡೆಯುತ್ತಿದೆ. ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.